ಮೈಸೂರು : ಮೈಸೂರಿನಲ್ಲೊಂದು ಅಮಾನವೀಯ ಘಟನೆಯೊಂದು ನಡೆದಿದ್ದು, ಕೇವಲ 14 ಸಾವಿರ ರೂ.ಗೆ ಹೆಣ್ಣು ಮಗುವನ್ನು ಮಾರಾಟ ಮಾಡಿರುವ ಘಟನೆ ನಡೆದಿದೆ.
ಮೈಸೂರು ಜಿಲ್ಲೆಯ ನಂಜನಗೂಡು ಪಟ್ಟಣದ ನೀಲಕಂಠ ನಗರದಲ್ಲಿ ಕೇವಲ 14 ಸಾವಿರ ರೂ.ಗೆ ಹೆಣ್ಣು ಮಗುವನ್ನು ಮಾರಾಟ ಮಾಡಿರುವ ಆರೋಪ ಕೇಳಿಬಂದಿದೆ.
ನೀಲಕಂಠೇಶ್ವರ ನಗರದ ಅನಿಲ್ ಕುಮಾರ್- ಸೌಮ್ಯ ದಂಪತಿಯ ಮಗುವನ್ನು ಕೇವಲ 14 ಸಾವಿರ ರೂ.ಗೆ ಗುಂಡ್ಲುಪೇಟೆಯ ಮೂಲದ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ. ಸೌಮ್ಯ ದಂಪತಿಗೆ ಮೂರು ಹೆಣ್ಣು ಮಕ್ಕಳಿದ್ದ ಕಾರಣ ಹೆಣ್ಣು ಮಗು ಅಮೂಲ್ಯಳನ್ನು 14 ಸಾವಿರ ರೂ.ಗೆ ಮಾರಾಟ ಮಾಡಿದ್ದಾರೆ ಎಂದು ಹೇಳಲಾಗಿದೆ.