ಬಾಗಲಕೋಟೆ : ರಾಜ್ಯದಲ್ಲಿ ಅಮಾನವೀಯ ಕೃತ್ಯ ನಡೆದಿದ್ದು, ಕಂಠಪೂರ್ತಿ ಕುಡಿದು ಪತಿಯೊಬ್ಬ ತನ್ನ ಪತ್ನಿಯ ತೆಲಬೋಳಿಸಿದ ಘಟನೆ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಕಡಕೋಳ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬಸಪ್ಪ ಎಂಬಾತ ತನ್ನ ಸ್ನೇಹಿತ ಸದಾಶಿವ ನ್ಯಾಮಗೌಡನ ಜೊತೆಗೆ ಸೇರಿಕೊಂಡು ಪತ್ನಿ ಶ್ರೀದೇವಿಯ ಅರ್ಧತಲೆ ಬೋಳಿಸಿದ್ದಾನೆ.
ಬಸಪ್ಪ ಪ್ರತಿನಿತ್ಯ ಮದ್ಯ ಸೇವಿಸಿ ಮನೆಗೆ ಬರುತ್ತಿದ್ದ. ಪತಿ ಕಾಟ ತಾಳಲಾಗದೇ ಪತ್ನಿ ಶ್ರೀದೇವಿ ತವರು ಮನೆಗೆ ಹೋಗಿದ್ದರು. 2 ತಿಂಗಳ ಹಿಂದಷ್ಟೇ ಗಂಡನ ಮನೆಗೆ ಶ್ರೀದೇವಿ ವಾಪಸ್ ಆಗಿದ್ದಳು. ನಿನ್ನೆ ಕೂಡ ಮದ್ಯ ಸೇವಿಸಿ ಬಂದಿದ್ದಕ್ಕೆ ಬಸಪ್ಪ-ಶ್ರೀದೇವಿ ನಡುವೆ ಜಗಳವಾಗಿದ್ದು, ಈ ವೇಳೆ ಬಸಪ್ಪ ತನ್ನ ಸ್ನೇಹಿತ ಜೊತೆಗೆ ಸೇರಿ ಪತ್ನಿ ತಲೆಬೋಳಿಸಿದ್ದಾನೆ.