ಉತ್ತರ ಕನ್ನಡ: ಜಿಲ್ಲೆಯಲ್ಲಿ ಮನಕಲಕುವ ಘಟನೆಯೊಂದು ವರದಿಯಾಗಿದೆ. ಟಾಯ್ಲೆಟ್ ಬಳಿಯಲ್ಲೇ ಒಂದು ದಿನದ ನವಜಾತ ಶಿಶುವನ್ನು ಪೊದೆಯಲ್ಲಿ ಬಿಸಾಕಿ ಹೋಗಿರುವಂತ ಘಟನೆ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರದ ವಿಜಯನಗರ ಜೋಪಡಿ ಬಳಿಯಲ್ಲಿರುವಂತ ಟಾಯ್ಲೆಟ್ ಬಳಿಯಲ್ಲಿ ಒಂದು ದಿನದ ನವಜಾತ ಶಿಶುವನ್ನು ಬಿಸಾಕಿ ಹೋಗಿರುವುದು ಪತ್ತೆಯಾಗಿದೆ.
ಕರುಳು ಬಳ್ಳಿಯನ್ನೂ ಕತ್ತರಿಸಿದೇ ಹೆಣ್ಣು ಶಿಶುವನ್ನು ಕಾರವಾರದ ವಿಜಯನಗರ ಟಾಯ್ಲೆಟ್ ಬಳಿಯ ಪೊದೆಯಲ್ಲಿ ಬಿಸಾಕಿ ದುಷ್ಕರ್ಮಿಗಳು ಹೋಗಿರುವುದಾಗಿ ತಿಳಿದು ಬಂದಿದೆ.
ವಿಷಯ ತಿಳಿದು ಸ್ಥಳಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿ, ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.