ಹಾಸನ: ಜಿಲ್ಲೆಯಲ್ಲಿ ಬೆಚ್ಚಿ ಬೀಳಿಸೋ ಕೃತ್ಯವೊಂದನ್ನು ಎಸಗಲಾಗಿದೆ. ಸಿನಿಮೀಯ ರೀತಿಯಲ್ಲಿ ಕಾರು ಕೆರೆಗೆ ತಳ್ಳಿ ಮಹಿಳೆಯನ್ನು ಹತ್ಯೆಗೈದು, ಕಿಡಿಗೇಡಿಗಳು ಕತೆ ಕಟ್ಟಿರುವಂತ ಘಟನೆ ನಡೆದಿದೆ.
ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಚಂದನಹಳ್ಳಿ ಗ್ರಾಮದಲ್ಲಿ ಪ್ರೀತಿ ನಿರಾಕರಿಸಿದಕ್ಕೆ ವಿವಾಹಿತ ಮಹಿಳೆಯನ್ನು ಕೊಲೆ ಮಾಡಿರುವಂತ ಆರೋಪ ಕೇಳಿ ಬಂದಿದೆ. ಸಿನಿಮೀಯ ರೀತಿಯಲ್ಲಿ ಕಾರು ಕೆರೆಗೆ ತಳ್ಳಿ ಮಹಿಳೆ ಹತ್ಯೆಗೈದಿರುವುದಾಗಿ ಹೇಳಲಾಗುತ್ತಿದೆ.
ಚಂದನಹಳ್ಳಿ ಸಮೀಪದ ಬೇಲೂರಿನ ಶ್ವೇತಾ(32) ಕೊಲೆ ಮಾಡಲಾಗಿದೆ. ಗಂಡನಿಂದ ದೂರಾಗಿ ತವರು ಮನೆಯನ್ನು ಮೃತ ಶ್ವೇತಾ ಸೇರಿದ್ದರು. ಇಂತಹ ಶ್ವೇತಾಗೆ ಹಾಸನದಲ್ಲಿ ಕೆಲಸ ಮಾಡುವಾಗ ರವಿ ಎಂಬಾತ ಪರಿಚಯವಾಗಿದ್ದನು.
ನಾನು ಪತ್ನಿ ಬಿಟ್ಟು ಬರ್ತೀನಿ, ನೀನು ಬಾ ಎಂದು ರವಿ ಎಂಬಾತ ಶ್ವೇತಾ ಪೀಡಿಸಿದ್ದನಂತೆ. ಆದರೇ ಶ್ವೇತ ಮಾತ್ರ ರವಿಯ ಪ್ರಸ್ತಾಪವನ್ನು ನಿರಾಕರಿಸಿದ್ದರು. ಇದೇ ಕಾರಣಕ್ಕೆ ರವಿ ಶ್ವೇತಾಳನ್ನು ಹತ್ಯೆಗೈದಿರುವುದಾಗಿ ಹೇಳಲಾಗುತ್ತಿದೆ.
ನಿನ್ನೆ ಹಾಸನದಿಂದ ತನ್ನ ಕಾರಿನಲ್ಲಿ ಶ್ವೇತಾಳನ್ನು ರವಿ ಕರೆತಂದಿದ್ದನು. ಆದರೇ ಚಂದನಹಳ್ಳಿ ಕೆರೆಗೆ ಕಾರು ಬೀಳಿಸಿ ಕತೆಯನ್ನು ಆರೋಪಿ ರವಿ ಕಟ್ಟಿದ್ದನಂತೆ. ಇದೀಗ ಶ್ವೇತಾ ಹತ್ಯೆಯ ಹಿಂದಿನ ರವಿ ಕೃತ್ಯ ಬಯಲಾಗಿದೆ.
ಡಿ.ದೇವರಾಜ ಅರಸು ಜನಪರ ಕೊಡುಗೆಗಳು ಮಾದರಿ: ಮದ್ದೂರು ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ