ಬೆಂಗಳೂರು: ನಗರದ ನೇರಳೆ ಮಾರ್ಗದ ನಮ್ಮ ಮೆಟ್ರೋ ರೈಲು ಸಂಚಾರದ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿ ಓಡಾಟದ ಹಿನ್ನಲೆಯಲ್ಲಿ ಮೆಟ್ರೋ ಸಂಚಾರವನ್ನು ಕೆಲ ಕಾಲ ಸ್ಥಗಿತಗೊಳಿಸಿರುವಂತ ಘಟನೆ ನಡೆದಿದೆ.

ಈ ಹಿಂದೆ ಯುವತಿಯರಿಗೆ, ಮಹಿಳೆಯರಿಗೆ ನಮ್ಮ ಮೆಟ್ರೋದಲ್ಲಿ ಕಿರುಕುಳ ನೀಡಿದಂತ ಘಟನೆಗಳು ನಡೆದಿದ್ದವು. ಇಂದು ಮೆಟ್ರೋ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಕೆಲ ಕಾಲ ಓಡಾಟ ನಡೆಸಿದ ಪರಿಣಾಮ, ಮೆಟ್ರೋ ಸಂಚಾರವನ್ನೇ ಕೆಲ ಕಾಲ ಸ್ಥಗಿತಗೊಳಿಸಿದಂತ ಘಟನೆ ನಡೆದಿದೆ.

ಜ್ಞಾನಭಾರತಿ ಹಾಗೂ ಪಟ್ಟಣಗೆರೆ ಮಧ್ಯದ ಮೆಟ್ರೋ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಓಡಾಡುತ್ತಿದ್ದದ್ದನ್ನು ನಿಲ್ದಾಣದಲ್ಲಿದ್ದಂತ ಭದ್ರತಾ ಸಿಬ್ಬಂದಿಗಳು ಗುರುತಿಸಿದ್ದಾರೆ. ಈ ಬಳಿಕ ಹಿರಿಯ ಅಧಿಕಾರಿಗಳಿಗೆ ಕೂಡಲೇ ಮಾಹಿತಿ ನೀಡಿದ್ದಾರೆ.

ಈ ಪರಿಸ್ಥಿತಿಯ ಗಂಭೀರತೆ ಅರಿತಂತ ಅಧಿಕಾರಿಗಳು ಕೂಡಲೇ ಮೆಟ್ರೋ ರೈಲು ಹಳಿಗಳ ಹೈವೋಲ್ಟ್ ವಿದ್ಯುತ್ ಸಂಚಾರವನ್ನು ಸ್ಥಗಿತಗೊಳಿಸಿದ್ದಾರೆ. ಮಧ್ಯಾಹ್ನ 3 ಗಂಟೆಯಿಂದ 3.27ರವರೆಗೆ ನೇರಳೆ ಮಾರ್ಗದಲ್ಲಿ ಮೆಟ್ರೋ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಮೆಟ್ರೋ ರೈಲು ಸಂಚಾರವನ್ನು ಸ್ಥಗಿತಗೊಳಿಸಿದ ನಂತ್ರ, ಅಪರಿಚಿತ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಬಳಿಕ ನಮ್ಮ ಮೆಟ್ರೋ ಸಂಚಾರವನ್ನು ಎಂದಿನಂತೆ ಪುನರಾರಂಭ ಮಾಡಿರೋದಾಗಿ ಬಿಎಂಆರ್ ಸಿಎಲ್ ಮಾಹಿತಿ ನೀಡಿದೆ.

BREAKING: ರಾಜ್ಯದ 5, 8 ಮತ್ತು 9ನೇ ತರಗತಿ ‘ಬೋರ್ಡ್​ ಪರೀಕ್ಷೆ’ಗೆ ‘ಸುಪ್ರೀಂ ಕೋರ್ಟ್’ ತಡೆಯಾಜ್ಞೆ | Board Exams

BREAKING : ರಾಜಸ್ಥಾನದಲ್ಲಿ ವಾಯುಪಡೆಯ ‘ತೇಜಸ್ ವಿಮಾನ’ ಪತನ, ‘ಪೈಲಟ್’ ಸುರಕ್ಷಿತ

BREAKING: 15 ಜನರಿದ್ದ ರಷ್ಯಾದ ಮಿಲಿಟರಿ ವಿಮಾನ ಮಾಸ್ಕೋ ಬಳಿ ಪತನ | Russian Military Plane Crashes

Share.
Exit mobile version