ಬೆಂಗಳೂರು: ನಿನ್ನೆಯಿಂದ 5, 8 ಮತ್ತು 9ನೇ ತರಗತಿಯ ಬೋರ್ಡ್ ಪರೀಕ್ಷೆ ಆರಂಭಗೊಂಡಿದೆ. ಈ ಪರೀಕ್ಷೆಗಳನ್ನು ರದ್ದುಗೊಳಿಸಿ ಹೈಕೋರ್ಟ್ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ವಿಭಾಗಿಯ ನ್ಯಾಯಪೀಠಕ್ಕೆ ಮೇಲ್ಮನವಿ ಮಾಡಿತ್ತು. ಆಗ ಬೋರ್ಡ್ ಪರೀಕ್ಷೆಗೆ ಅನುಮತಿ ನೀಡಲಾಗಿತ್ತು. ಈ ಬೆನ್ನಲ್ಲೇ ಇಂದು ಹೈಕೋರ್ಟ್ ವಿಭಾಗೀಯ ಪೀಠದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಈ ಮೂಲಕ ಬೋರ್ಡ್ ಪರೀಕ್ಷೆ ರದ್ದುಗೊಂಡೆತೆ ಆಗಿದೆ.

ರಾಜ್ಯ ಹೈಕೋರ್ಟ್ ವಿಭಾಗೀಯ ನ್ಯಾಯಪೀಠವು ರಾಜ್ಯ ಪಠ್ಯಕ್ರಮ ಇರುವ ಶಾಲೆಗಳ 5, 8 ಮತ್ತು 9ನೇ ತರಗತಿಗಳ ಬೋರ್ಡ್ ಪರೀಕ್ಷೆಗೆ ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಅರ್ಜಿ ಸಲ್ಲಿಸಲಾಗಿತ್ತು. ಖಾಸಗಿ ಅನುವಾದ ರಹಿತ ಶಾಲೆಗಳು ಸಲ್ಲಿಸಿದ್ದಂತ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ನ್ಯಾಯಪೀಠವು ಇಂದು ವಿಚಾರಣೆ ನಡೆಸಿತು.

ಈಗಾಗಲೇ ಶಿಕ್ಷಣ ಇಲಾಖೆ ಸೋಮವಾರ ಮತ್ತು ಮಂಗಳವಾರದಂದು ಎರಡು ವಿಷಯಗಳ ಪರೀಕ್ಷೆಗಳನ್ನು ನಡೆಸಿದೆ. ಹೀಗಾಗಿ ಇನ್ನುಳಿದ ವಿಷಯಗಳ 5, 8 ಮತ್ತು 9ನೇ ತರಗತಿ ವಿಷಯಗಳ ಪರೀಕ್ಷೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ಮುಂದುವರೆಸಿ ಆದೇಶಿಸಿದೆ. ಆದರೇ 11ನೇ ತರಗತಿ ಪರೀಕ್ಷೆಗಳು ಪೂರ್ಣಗೊಂಡಿರುವುದರಿಂದ ನ್ಯಾಯಪೀಠವು ಯಾವುದೇ ಆದೇಶ ಮಾಡಿಲ್ಲ.

BREAKING : ರಾಜಸ್ಥಾನದಲ್ಲಿ ವಾಯುಪಡೆಯ ‘ತೇಜಸ್ ವಿಮಾನ’ ಪತನ, ‘ಪೈಲಟ್’ ಸುರಕ್ಷಿತ

BREAKING: ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಶೇ.38.75ರಿಂದ 42.5ರಷ್ಟು ಹೆಚ್ಚಳ: ರಾಜ್ಯ ಸರ್ಕಾರ ಅಧಿಕೃತ ಆದೇಶ | DA Hike

Share.
Exit mobile version