ಮೈಸೂರು: ನಗರದ ಜನರು ಬೆಚ್ಚಿ ಬೀಳುವಂತ ಘಟನೆ ನಡೆದಿದೆ. ಅದೇ ಹಾಡಹಗಲೇ ಮಹಿಳೆಗೆ ಯುವಕನೊಬ್ಬ ಚಾಕುವಿನಿಂದ ಮನಬಂದಂತೆ ಇರಿದಿರುವಂತ ಘಟನೆ ನಡೆದಿದೆ.
ಮೈಸೂರಿನ ಕೃಷ್ಣಮೂರ್ತಿಪುರಂನ ಅಂಬೇಡ್ಕರ್ ಪಾರ್ಕ್ ಮುಂದೆ ಯುವಕನೊಬ್ಬ ಮಹಿಳೆಗೆ ಚಾಕುವಿನಿಂದ ಇರಿದಿರುವಂತ ಬೆಟ್ಟಿ ಬೀಳಿಸುವಂತ ಘಟನೆ ನಡೆದಿದೆ.
ಪಾರ್ಕ್ ಮುಂಭಾಗ ಇಬ್ಬರೂ ಒಟ್ಟಿಗೆ ಕುಳಿತು ಮದ್ಯ ಸೇವನೆ ಮಾಡಿದ್ದಾರೆ. ಮದ್ಯ ಸೇವನೆ ಬಳಿಕ ಗಲಾಟೆ ಶುರುವಾಗಿದೆ. ಈ ಗಲಾಟೆ ತಾರಕಕ್ಕೇರಿದಂತ ಸಂದರ್ಭದಲ್ಲಿ ಚಾಕುವಿನಿಂದ ಮಹಿಳೆಗೆ ಹಲ್ಲೆ ಮಾಡಿದ್ದಾನೆ.
ಯುವಕ ಏಕಾಏಕಿ ಮಹಿಳೆಯ ತಲೆ, ಕುತ್ತಿಗೆ, ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾನೆ. ಚಾಕುವಿನಿಂದ ಇರಿದ ಯುವಕನೇ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಅಲ್ಲಿಂದ ಪರಾರಿಯಾಗಿದ್ದಾನೆ. ಇದೀಗ ಮಹಿಳೆಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ. ಈ ಸಂಬಂಧ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BREAKING: ಚಿಕ್ಕಮಗಳೂರಲ್ಲಿ ASI ಕಿರುಕುಳಕ್ಕೆ ಬೇಸತ್ತು SP ಕಚೇರಿ ಎದುರೇ ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ
UPSC ಪೂರ್ವಭಾವಿ, ಮುಖ್ಯ ಪರೀಕ್ಷೆಗೆ ‘ಉಚಿತ ತರಬೇತಿ’ಗೆ ಅರ್ಜಿ ಆಹ್ವಾನ