ಬೆಂಗಳೂರು: ನಗರದಲ್ಲಿ ಬೆಚ್ಚಿ ಬೀಳಿಸೋ ಕೃತ್ಯ ಎನ್ನುವಂತೆ ಕಟ್ಟಡದ ಮೇಲಿನಿಂದ ಪತಿಯನ್ನು ತಳ್ಳಿ, ಪತ್ನಿಯೊಬ್ಬರು ಕೊಲೆಗೈದ ಘಟನೆ ನಡೆದಿದೆ.
ಬೆಂಗಳೂರಿನ ಆಂಧ್ರಹಳ್ಳಿಯ ಮಂಜುನಾಥ ಬಡಾವಣೆಯಲ್ಲಿ ವೆಂಕಟೇಶ್(65) ಎಂಬಾತನನ್ನು ಪತ್ನಿಯೇ ಕಟ್ಟಡದ ಮೇಲಿನಿಂದ ತಳ್ಳಿ ಕೊಲೆ ಮಾಡಿರೋದಾಗಿ ಹೇಳಲಾಗುತ್ತಿದೆ.
ಸೋದರ ಮಾವ ರಂಗಸ್ವಾಮಿ, ಮಗಳು ಪಾರ್ವತಿ ಸೇರಿ ಈ ಕೃತ್ಯವೆಸಗಿದ್ದಾರೆ. ಈ ಮೂಲಕ ಸೋದರ ಮಾವನ ಜೊತೆ ಸೇರಿ ಗಂಡನನ್ನೇ ಹೆಂಡ್ತಿ ಹತ್ಯೆ ಮಾಡಿದ್ದಾರೆ.
10 ವರ್ಷದ ಹಿಂದೆ ಪೇಂಟಿಂಗ್ ಕೆಲಸ ಮಾಡುತ್ತಿದ್ದಂತ ವೆಂಕಟೇಶ್ ಮೊದಲ ಪತ್ನಿಯನ್ನು ಬಿಟ್ಟಿದ್ದನು. 6 ವರ್ಷಗಳ ಹಿಂದೆ ಪಾರ್ವತಿಯನ್ನು ಮದುವೆಯಾಗಿದ್ದನು. ಮನೆಯನ್ನು ತನ್ನ ಹೆಸರಿಗೆ ಬರೆಯುವಂತೆ ಪಾರ್ವತಿ ಗಲಾಟೆ ಮಾಡುತ್ತಿದ್ದರಂತೆ.
ಮನೆಯಿಲ್ಲ ಅಂದ್ರೆ 6 ಲಕ್ಷ ಹಣ ಕೊಡುವಂತೆಯೂ ವೆಂಕಟೇಶ್ ಪತ್ನಿ ಪಾರ್ವತಿ ಪಟ್ಟು ಹಿಡಿದಿದ್ದರಂತೆ. ಆದರೇ ವೆಂಕಟೇಶ್ 2.5 ಲಕ್ಷ ರೂಪಾಯಿ ನೀಡೋದಾಗಿ ಹೇಳಿದ್ದನಂತೆ. ಇದೇ ವಿಚಾರಕ್ಕೆ ಗಂಡ ಹೆಂಡತಿ ನಡುವೆ ಜಗಳ ಉಂಟಾಗಿ, ಸೋದರ ಮಾವನ ಜೊತೆಗೆ ಸೇರಿಕೊಂಡು ಪತಿಯನ್ನೇ ಪತ್ನಿ ಕಟ್ಟಡದ ಮೇಲಿನಿಂದ ತಳ್ಳಿ ಹತ್ಯೆ ಮಾಡಿರೋದಾಗಿ ಹೇಳಲಾಗುತ್ತಿದೆ.
ಬಿಹಾರ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ತೇಜಸ್ವಿ ಯಾದವ್ ಆಯ್ಕೆ
ಸಂಪುಟ ವಿಸ್ತರಣೆಯಾದರೆ ಡಿ.ಕೆ.ಶಿವಕುಮಾರ್‌ಗೆ ಪಂಗನಾಮ: ಪ್ರತಿಪಕ್ಷ ನಾಯಕ ಆರ್.ಅಶೋಕ








