ಬೆಂಗಳೂರು: ನಗರದಲ್ಲಿ ಶಾಕಿಂಗ್ ಎನ್ನುವಂತ ಘಟನೆಯೊಂದು ನಡೆದಿದೆ. ಹೆತ್ತ ತಾಯಿಯೇ ಮಗಳನ್ನು ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿರುವಂತ ಘಟನೆ ನಡೆದಿದೆ.
ಬೆಂಗಳೂರಿನ ಲಕ್ಕೇನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಮಹಾಲಕ್ಷ್ಮೀ ಎಂಬುವರು ತನ್ನ ಐದು ವರ್ಷದ ಪುತ್ರಿ ಸಿರಿಯನ್ನು ಕೊಂದು ತಾನೂ ಆ ಬಳಿಕ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದರೇ ಆತ್ಮಹತ್ಯೆ ಯತ್ನ ವಿಫಲವಾಗಿದ್ದು, ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಅಂದಹಾಗೇ ಮಹಾಲಕ್ಷ್ಮೀ 8 ವರ್ಷಗಳ ಹಿಂದೆ ಪ್ರೀತಿಸಿ ಜಯರಾಮ್ ಎಂಬುವರನ್ನು ಮದುವೆಯಾಗಿದ್ದರು. ಆದರೇ ಇತ್ತೀಚೆಗೆ ಜಯರಾಮ್ ಹಾಗೂ ಮಹಾಲಕ್ಷ್ಮಿ ನಡುವೆ ಜಗಳ ಹೆಚ್ಚಾಗಿತ್ತು. ಇಂದು ಕೂಡ ಜಗಳವಾದ ನಂತ್ರ ಗಂಡನ ಮೇಲಿನ ಸಿಟ್ಟಿನಿಂದ ಪುತ್ರಿ ಸಿರಿ ಕೊಂದು, ತಾನೂ ಆತ್ಮಹತ್ಯೆ ಯತ್ನದಂತ ಘಟನೆ ನಡೆದಿದೆ ಎನ್ನಲಾಗುತ್ತಿದೆ.
ಹೀಗಿವೆ ಇಂದಿನ ‘ರಾಜ್ಯ ಸಚಿವ ಸಂಪುಟ ಸಭೆ’ಯ ಪ್ರಮುಖ ಹೈಲೈಟ್ಸ್ | Karnataka Cabinet Meeting Highligts
`ಪ್ಯಾರಸಿಟಮಾಲ್’ ಬಳಸಿ ಬಟ್ಟೆಗಳ ಕಲೆಗಳನ್ನು ತೆಗೆಯಬಹುದು : ವಿಡಿಯೋ ವೈರಲ್ | WATCH VIDEO