Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

LPG ಬಿಟ್ಟು ಪೈಪ್ಡ್ ನ್ಯಾಚುರಲ್ ಗ್ಯಾಸ್ ಗೆ ಶಿಫ್ಟ್ ಆಗಿ: ದೇಶಾದ್ಯಂತ ಸರ್ಕಾರದಿಂದ ಹೊಸ ಅಭಿಯಾನ !

ಜನರ ಪ್ರೀತಿ, ವಿಶ್ವಾಸಕ್ಕೆ ಎಂದಿಗೂ ಚಿರಋಣಿ: ಮದ್ದೂರು ಶಾಸಕ ಕೆ.ಎಂ.ಉದಯ್

​’ನಿಮ್ಮ ಮಕ್ಕಳನ್ನು ಪ್ರತಿಭಟಿಸಲು ಬಿಡಿ’: ಪುಣೆಯಲ್ಲಿ ನಾಳೆ ಸಿಜೆಪಿ ಅಭಿಯತ್ ದಿಪ್ಕೆ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : ಪತ್ನಿಯನ್ನೇ ಬಾಡಿಗೆಗೆ ಕೊಡುತ್ತೇನೆ ಎಂದ ಪತಿ : ಪವಿತ್ರ ಸಂಬಂಧವನ್ನು ಹರಾಜಿಗಿಟ್ಟ ವಿಡಿಯೋ ವೈರಲ್ | WATCH VIDEO
INDIA

SHOCKING : ಪತ್ನಿಯನ್ನೇ ಬಾಡಿಗೆಗೆ ಕೊಡುತ್ತೇನೆ ಎಂದ ಪತಿ : ಪವಿತ್ರ ಸಂಬಂಧವನ್ನು ಹರಾಜಿಗಿಟ್ಟ ವಿಡಿಯೋ ವೈರಲ್ | WATCH VIDEO

By kannadanewsnow57

ನವದೆಹಲಿ: ಸಂಬಂಧಗಳ ಪವಿತ್ರತೆಗೆ ಕೊಳ್ಳಿ ಇಡುವಂತಹ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ಹಣದ ಹಪಾಹಪಿಗೆ ಬಿದ್ದ ವ್ಯಕ್ತಿಯೊಬ್ಬ ತನ್ನ ಸ್ವಂತ ಪತ್ನಿಯನ್ನೇ ‘ಬಾಡಿಗೆಗೆ ಲಭ್ಯವಿದ್ದಾಳೆ’ ಎಂದು ವಿಡಿಯೋ ಮಾಡಿ ಬಹಿರಂಗವಾಗಿ ಘೋಷಿಸುವ ಮೂಲಕ ಮನುಷ್ಯತ್ವಕ್ಕೇ ಮಸಿ ಬಳಿದಿದ್ದಾನೆ.

ಘಟನೆಯ ಹಿನ್ನೆಲೆ:

ಇಂದಿನ ಕಾಲದಲ್ಲಿ ಹಣದುಬ್ಬರ ಮತ್ತು ಜೀವನ ನಿರ್ವಹಣೆ ಕಷ್ಟವಾಗಿರುವುದು ನಿಜ. ಆದರೆ, ಅದಕ್ಕೋಸ್ಕರ ಪತ್ನಿಯನ್ನೇ ಬಾಡಿಗೆಗೆ ನೀಡುವ ಕ್ರೂರ ನಿರ್ಧಾರಕ್ಕೆ ಈ ವ್ಯಕ್ತಿ ಮುಂದಾಗಿರುವುದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. “ನನಗೆ ಹೆಂಡತಿಯ ಖರ್ಚು ವೆಚ್ಚಗಳನ್ನು ಭರಿಸಲು ಸಾಧ್ಯವಾಗುತ್ತಿಲ್ಲ, ಆದ್ದರಿಂದ ಅವಳನ್ನು ಬಾಡಿಗೆಗೆ ನೀಡುತ್ತಿದ್ದೇನೆ” ಎಂದು ಈತ ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ.

ಸಂಪ್ರದಾಯಕ್ಕೆ ಧಕ್ಕೆ:

ದೊಡ್ಡ ನಗರಗಳ ಶ್ರೀಮಂತರ ವಲಯದಲ್ಲಿ ‘ವೈಫ್ ಸ್ವಾಪಿಂಗ್’ (ಪತ್ನಿಯರ ಅದಲು ಬದಲು) ನಂತಹ ಪಾಶ್ಚಿಮಾತ್ಯ ಪ್ರವೃತ್ತಿಗಳ ಬಗ್ಗೆ ನಾವು ಕೇಳಿರಬಹುದು. ಆದರೆ, ಭಾರತೀಯ ಸಂಸ್ಕೃತಿಯಲ್ಲಿ ವಿವಾಹ ಎಂಬುದು ಏಳು ಜನ್ಮಗಳ ಪವಿತ್ರ ಬಂಧ. ಧರ್ಮ, ಅರ್ಥ, ಕಾಮ ಮತ್ತು ಮೋಕ್ಷದ ಹಾದಿಯಲ್ಲಿ ಜೊತೆಯಾಗಿ ನಡೆಯುವ ಭಾಷೆ ನೀಡಿದ ಪತಿ, ಇಂದು ಪತ್ನಿಯನ್ನು ಕೇವಲ ಒಂದು ‘ವಸ್ತು’ ಎಂದು ಪರಿಗಣಿಸಿರುವುದು ಘೋರ ಕಲಿಯುಗದ ಸಂಕೇತದಂತಿದೆ.

ನೆಟ್ಟಿಗರ ಆಕ್ರೋಶ:

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗಳು ಶುರುವಾಗಿವೆ. ನೆಟ್ಟಿಗರು ಈತನ ನಡೆಯನ್ನು ಕಟುವಾಗಿ ಟೀಕಿಸುತ್ತಿದ್ದಾರೆ:

ಈತ ಪತಿಯಲ್ಲ, ಒಬ್ಬ ದಲ್ಲಾಳಿ” ಎಂದು ಒಬ್ಬ ಬಳಕೆದಾರ ಕಮೆಂಟ್ ಮಾಡಿದ್ದಾರೆ.

“ನಮ್ಮ ಸಂಸ್ಕೃತಿಯಲ್ಲಿ ಗೌರವಕ್ಕೆ ಬೆಲೆ ನೀಡಲಾಗುತ್ತದೆ, ಆದರೆ ಇಲ್ಲಿ ಪತ್ನಿಯನ್ನೇ ಹರಾಜಿಗಿಡಲಾಗಿದೆ, ಇದು ನಾಚಿಕೆಗೇಡಿನ ಸಂಗತಿ” ಎಂದು ಮತ್ತೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂತಹ ವ್ಯಕ್ತಿಯನ್ನು ಪತ್ನಿ ಕೂಡಲೇ ಮನೆ ಬಿಟ್ಟು ಹೊರಹಾಕಬೇಕು ಅಥವಾ ತಾನೇ ಆತನಿಂದ ದೂರವಾಗಬೇಕು” ಎಂಬ ಸಲಹೆಗಳೂ ಕೇಳಿಬರುತ್ತಿವೆ.

ಒಟ್ಟಾರೆಯಾಗಿ, ವೈಯಕ್ತಿಕ ಸುಖ ಅಥವಾ ಹಣದ ಆಸೆಗಾಗಿ ಮಾನವ ಸಂಬಂಧಗಳನ್ನು ಹರಾಜಿಗಿಡುತ್ತಿರುವ ಇಂತಹ ಘಟನೆಗಳು ಸಮಾಜವು ಎತ್ತ ಸಾಗುತ್ತಿದೆ ಎಂಬ ಆತಂಕವನ್ನು ಮೂಡಿಸಿವೆ.

WATCH VIDEO

https://kannadanewsnow.com/kannada/wp-content/uploads/2026/02/Viral-Video.mp4
SHOCKING: Husband says he will rent his wife out: Video of him auctioning off their sacred relationship goes viral | WATCH VIDEO
Share. Facebook Twitter LinkedIn WhatsApp Email

Related Posts

LPG ಬಿಟ್ಟು ಪೈಪ್ಡ್ ನ್ಯಾಚುರಲ್ ಗ್ಯಾಸ್ ಗೆ ಶಿಫ್ಟ್ ಆಗಿ: ದೇಶಾದ್ಯಂತ ಸರ್ಕಾರದಿಂದ ಹೊಸ ಅಭಿಯಾನ !

2 Mins Read

​’ನಿಮ್ಮ ಮಕ್ಕಳನ್ನು ಪ್ರತಿಭಟಿಸಲು ಬಿಡಿ’: ಪುಣೆಯಲ್ಲಿ ನಾಳೆ ಸಿಜೆಪಿ ಅಭಿಯತ್ ದಿಪ್ಕೆ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

1 Min Read

ಮೇಡ್ ಇನ್ ಇಂಡಿಯಾ ಕ್ರಾಂತಿ: AI ಕಾರ್ಯಾಚರಣೆಗಾಗಿ ಜೋಹೋದಿಂದ ದೇಶೀಯ ಸರ್ವರ್ ‘ನಾಥು ಲಾ’ ಅನಾವರಣ!

1 Min Read
Recent News

LPG ಬಿಟ್ಟು ಪೈಪ್ಡ್ ನ್ಯಾಚುರಲ್ ಗ್ಯಾಸ್ ಗೆ ಶಿಫ್ಟ್ ಆಗಿ: ದೇಶಾದ್ಯಂತ ಸರ್ಕಾರದಿಂದ ಹೊಸ ಅಭಿಯಾನ !

ಜನರ ಪ್ರೀತಿ, ವಿಶ್ವಾಸಕ್ಕೆ ಎಂದಿಗೂ ಚಿರಋಣಿ: ಮದ್ದೂರು ಶಾಸಕ ಕೆ.ಎಂ.ಉದಯ್

​’ನಿಮ್ಮ ಮಕ್ಕಳನ್ನು ಪ್ರತಿಭಟಿಸಲು ಬಿಡಿ’: ಪುಣೆಯಲ್ಲಿ ನಾಳೆ ಸಿಜೆಪಿ ಅಭಿಯತ್ ದಿಪ್ಕೆ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

ಮೇಡ್ ಇನ್ ಇಂಡಿಯಾ ಕ್ರಾಂತಿ: AI ಕಾರ್ಯಾಚರಣೆಗಾಗಿ ಜೋಹೋದಿಂದ ದೇಶೀಯ ಸರ್ವರ್ ‘ನಾಥು ಲಾ’ ಅನಾವರಣ!

State News
KARNATAKA

ಜನರ ಪ್ರೀತಿ, ವಿಶ್ವಾಸಕ್ಕೆ ಎಂದಿಗೂ ಚಿರಋಣಿ: ಮದ್ದೂರು ಶಾಸಕ ಕೆ.ಎಂ.ಉದಯ್

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಮಂಡ್ಯ : ಕ್ಷೇತ್ರದ ಜನರ ಪ್ರೀತಿ, ವಿಶ್ವಾಸಕ್ಕೆ ನಾನು ಎಂದೆದಿಗೂ ಚಿರಋಣಿಯಾಗಿರುತ್ತೇನೆ ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು. ಮದ್ದೂರು ತಾಲೂಕಿನ…

BIG NEWS: ಮೇಲುಕೋಟೆ ಯೋಗನರಸಿಂಹಸ್ವಾಮಿ ದೇವಸ್ಥಾನದ ಖಜಾನೆಗೆ ಕನ್ನ: ಅರ್ಚಕರು, ಸಿಬ್ಬಂದಿ ವಿರುದ್ಧ ದೂರು!

ಮಕ್ಕಳ ಪೋಷಕರ ಗಮನಕ್ಕೆ: ಜೂನ್.28ರಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನ, ತಪ್ಪದೇ ಹಾಕಿಸಿ

12 ವರ್ಷಗಳ ಸಾರ್ಥಕ ಸೇವೆ: ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿದ ಹೆಚ್.ಡಿ. ಕುಮಾರಸ್ವಾಮಿ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.