ಬೆಂಗಳೂರು : ಬೆಂಗಳೂರಿನಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದ್ದು, ಪ್ರೀತಿಸಿ ಮದುವೆಯಾದ ಮೂರೇ ತಿಂಗಳಿಗೆ ಪತಿ ತನ್ನ ಪತ್ನಿಗೆ ಅಶ್ಲೀಲ ವಿಡಿಯೋ ತೋರಿಸಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾನೆ.
ಹೌದು, ಗಂಡನ ವಿಚಿತ್ರ ವರ್ತನೆ ಹಾಗೂ ಕಿರುಕುಳಕ್ಕೆ ಬೇಸತ್ತು ಕೇಂದ್ರ ವಿಭಾಗದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಪ್ರೀತಿಸಿ ಮದುವೆಯಾದ ನನ್ನ ಗಂಡ ಮನೆಯಲ್ಲಿ ಅತ್ತೆ-ಮಾವನ ಮುಂದೆ ಹಾಗೂ ಪ್ಯಾಸೇಜ್ನಲ್ಲೂ ಬೆತ್ತಲೆಯಾಗೇ ಓಡಾಡ್ತಾನೆ ಎಂದು ಪತ್ನಿ ಆರೋಪಿಸಿದ್ದಾರೆ.
ಸಾಫ್ಟ್ವೇರ್ ಕಂಪನಿಯಲ್ಲಿ ಹೆಚ್.ಆರ್ ಆಗಿ ಕೆಲಸ ಮಾಡ್ತಿದ್ದ ಮಂಜುನಾಥ್ ಎಂಬಾತ ಅದೇ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಮಹಿಳೆಯನ್ನ ಪ್ರೀತಿಸಿ ಮದುವೆಯಾಗಿದ್ದರಂತೆ. ಸೆಪ್ಟೆಂಬರ್ ತಿಂಗಳಲ್ಲಿ ಮಂಜುನಾಥ್ ಹಾಗೂ ಸಂತ್ರಸ್ಥೆ ಮದುವೆಯಾಗಿದೆ. ಮದುವೆಯಾದ ಮೂರೇ ತಿಂಗಳಿಗೆ ಗಂಡನ ಹುಚ್ಚಾಟಕ್ಕೆ ಮಹಿಳೆ ಬೇಸತ್ತು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಮಂಜುನಾಥನೇ ಮಹಿಳೆಗೆ ವಿಚಿತ್ರ ಲೈಂಗಿಕ ಕ್ರಿಯೆಗೆ ಒತ್ತಾಯ ಮಾಡುತ್ತಾನೆ. ಮನೆಯ ಒಳಗೆ ಹಾಗೂ ಪ್ಯಾಸೆಜ್ ನಲ್ಲೂ ಬೆತ್ತಲೆಯಾಗಿಯೇ ಓಡಾಡುತ್ತಾನೆ ಎಂದು ಗಂಡನ ಕಿರುಕುಳಕ್ಕೆ ಬೇಸತ್ತು ಮಹಿಳೆ ಠಾಣೆ ಮೆಟ್ಟಿಲೇರಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಕೇಂದ್ರ ವಿಭಾಗದ ಮಹಿಳಾ ಠಾಣೆ ಪೊಲೀಸರು, ಕೇಂದ್ರ ವಿಭಾಗದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








