ಉಡುಪಿ : ಉಡುಪಿಯಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ತಾಯಿ ಕೈಯಿಂದ ಜಾರಿ ಬಾವಿಗೆ ಬಿದ್ದು ಮಗು ಸಾವನ್ನಪ್ಪಿರುವ ಘಟನೆ ನಡೆದಿದೆ.
ಉಡುಪಿ ನಗರದ ಕಿನ್ನಿಮೂಲ್ಕಿ ಬಳಿ ಈ ಘಟನೆ ನಡೆದಿದ್ದು, ಬಾವಿಗೆ ಬಿದ್ದ ಒಂದೂವರೆ ವರ್ಷದ ಮಗು ಕೀರ್ತನಾ ಸಾವನ್ನಪ್ಪಿದೆ. ನೀರು ಸೇದುವಾಗ ತಾಯಿ ಕೈಯಿಂದ ಮಗು ಬಾವಿಗೆ ಬಿದ್ದಿದದೆ. ಹಗ್ಗದ ಸಹಾಯದಿಂದ ತಾಯಿ ಬಾವಿಗೆ ಇಳಿದಿದ್ದಾರೆ. ಆದರೆ ಮಗು ಅದಾಗಲೇ ಮೃತಪಟ್ಟಿದೆ.
ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ.








