ಉತ್ತರ ಕನ್ನಡ : ತಮಾಷೆ ಮಾಡೋಕೆ ಹೋಗಿ ಪ್ರಾಣವೇ ಹೋಗಿದ್ದು, ಏರ್ ಗನ್ ನಿಂದ ಅಣ್ಣನ ಮೇಲೆ ತಮ್ಮ ಫೈರಿಂಗ್ ಮಾಡಿದ ಪರಿಣಾಮ ಅಣ್ಣ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ತಮಾಷೆಗೆಂದು ತಮ್ಮ ಅಣ್ಣನ ಮೇಲೆ ಫೈರಿಂಗ್ ನಡೆಸಿದ್ದು, ಈ ವೇಳೆ ಗುಂಡು ಸಿಡಿದು ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಬಾಲಕನ ಮೃತದೇಹವನ್ನು ಶಿರಸಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಸ್ಥಳಕ್ಕೆ ಎಸ್ ಪಿ ಜಗದೀಶ್ ಹಾಗೂ ಸಿಪಿಐ ಶಶಿಕಾಂತ್ ವರ್ಮಾ ಭೇಟಿ ನೀಡಿದ್ದಾರೆ.
ಮಕ್ಕಳ ಜೊತೆ ಆಟವಾಡುವಾಗ ಈ ಘಟನೆ ನಡೆದಿದೆ. ತಮಾಷೆಗಂತ ಏರ್ ಗನ್ ನಿಂದ ಅಣ್ಣನ ಮೇಲೆ ತಮ್ಮ ಫೈರಿಂಗ್ ಮಾಡಿದ್ದಾನೆ. ಈ ವೇಳೆ ಗುಂಡು ಸಿಡಿದು ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮಗನನ್ನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.