ರಾಯಚೂರು : ರಸ್ತೆ ದಾಟುತ್ತಿದ್ದಾಗ KKRTC ಬಸ್ಸಿಗೆ ಸಿಲುಕಿ ನಾಲ್ಕು ವರ್ಷದ ಮಗು ಸ್ಥಳದಲ್ಲೆ ಮೃತಪಟ್ಟ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮದರಕಲ್ ಗ್ರಾಮದ ಬಳಿ ನಡೆದಿದೆ.
ನಾಲ್ಕು ವರ್ಷದ ಮಗುವಿನ ಮೇಲೆ ಕೆ.ಕೆ.ಆರ್.ಟಿ.ಸಿ ಬಸ್ ಹರಿದು ಹೋಗಿದ್ದು, ಕಂದಮ್ಮ ಸ್ಥಳದಲ್ಲೇ ಸಾವನ್ನಪ್ಪಿದೆ. ನಾಲ್ಕು ವರ್ಷದ ವಿದ್ಯಾಶ್ರೀ ಮೃತ ಮಗು. ಗೂಗಲ್ ನಿಂದ ದೇವದುರ್ಗಕ್ಕೆ ತೆರಳುತ್ತಿದ್ದ ಬಸ್ ಗೆ ಬಾಲಕಿ ಅಚಾನಕ್ ಆಗಿ ರಸ್ತೆಯಲ್ಲಿ ಅಡ್ಡ ಬಂದಿದ್ದಾಳೆ. ಬಸ್ ಮಗುವಿನ ಮೇಲೆಯೇ ಹರಿದು ಹೋಗಿದ್ದು, ಸ್ಥಳದಲ್ಲೇ ಬಾಲಕಿ ಸಾವನ್ನಪ್ಪಿದ್ದಾಳೆ.
ಬಸ್ ಬರುವುದನ್ನೂ ಗಮನಿಸದೇ ಮಗು ರಸ್ತೆ ದಾಟುತ್ತಿದ್ದಾಗ ಈ ದುರಂತ ಸಂಭವಿಸಿದೆ. ಮಗು ಬಸ್ ಚಕ್ರದಡಿ ಸಿಲುಕಿ ಮಗು ಸಾವನ್ನಪ್ಪಿದೆ. ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಗಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








