ಬೆಂಗಳೂರು : ಬೆಂಗಳೂರಿನಲ್ಲಿ ಬೆಚ್ಚಿ ಬೆಳಿಸುವಂತಹ ಘಟನೆ ನಡೆದಿದ್ದು ಪತ್ನಿಯನ್ನು ಕೊಂದು ಬಳಿಕ ಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸುಬ್ರಮಣ್ಯಪುರದ ಚಿಕ್ಕ ಗೌಡನಪಾಳ್ಯದಲ್ಲಿ ಈ ಒಂದು ಭೀಕರ ಕೊಲೆ ನಡೆದಿದೆ.
ಬೇಬಿ (65) ಕೊಂದು ಪತಿ ವೆಂಕಟೇಶನ್ (65) ಆತ್ಮಹತ್ಯೆಗೆ ಶರಣಾಗಿದ್ದಾರೆ ವೆಂಕಟೇಶ್ ಬಿಎಂಟಿಸಿ ಡ್ರೈವರ್ ಕೆಲಸ ನಿರ್ವಹಿಸಿ ನಿವೃತ್ತಿ ಹೊಂದಿದ್ದರು. ಪತ್ನಿಗೆ ಸ್ಟ್ರೋಕ್ ಆಗಿ ವೀಲ್ ಚೇರ್ ನಲ್ಲಿ ಜೀವನ ಸಾಗಿಸುತ್ತಿದ್ದರು. ಸಣ್ಣ ಪುಟ್ಟ ವಿಚಾರಗಳಿಗೂ ಕೂಡ ಇಬ್ಬರ ಮಧ್ಯ ಆದಾಗ ಜಗಳ ಆಗುತ್ತಿತ್ತು. ಮಕ್ಕಳು ಹೊರಗಡೆ ಹೋದಾಗ ದಂಪತಿಗಳು ಜಗಳ ಮಾಡಿಕೊಳ್ಳುತ್ತಿದ್ದರು.
ಅದೇ ರೀತಿ ನವೆಂಬರ್ 2ರಂದು ಮಂಗಳವಾರ ಇಬ್ಬರು ಜಗಳ ಮಾಡಿಕೊಂಡಿದ್ದಾರೆ ಗಲಾಟೆ ವಿಕೋಪಕ್ಕೆ ಹೋಗಿ ವೈರಿನಿಂದ ಪತ್ನಿಯ ಕುತ್ತಿಗೆ ಬಿಗಿದು ವೆಂಕಟೇಶನ್ ಕೊಲೆ ಮಾಡಿದ್ದಾರೆ. ನಂತರ ಅದೇ ವೈರ್ ನಲ್ಲಿ ತಾನು ಸಹ ನೇಣು ಬಿಗಿದುಕೊಂಡು ವೆಂಕಟೇಶನ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಸುಬ್ರಮಣ್ಯಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.








