ಸೌದಿ ಅರೇಬಿಯಾದಲ್ಲಿ ಭೀಕರ ದುರಂತವೊಂದು ಸಂಭವಿಸಿದ್ದು, ಪಾರ್ಕ್ ನಲ್ಲಿರುವ ಬೃಹತ್ ಸ್ವಿಂಗ್ ಮುರಿದು ಬಿದ್ದು 23 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಸೌದಿ ಅರೇಬಿಯಾದ ತೈಫ್ನ ಅಲ್ ಹಡಾ ಪ್ರದೇಶದ ಗ್ರೀನ್ ಮೌಂಟೇನ್ ಪಾರ್ಕ್ನಲ್ಲಿ ಈ ಭೀಕರ ದುರಂತ ಸಂಭವಿಸಿದೆ. ಜೆಟ್ ಚಕ್ರವನ್ನು ಹೋಲುವ ಜೋಕಾಲಿ ಕಂಬವೊಂದು ಇದ್ದಕ್ಕಿದ್ದಂತೆ ಮುರಿದು 23 ಜನರು ಗಾಯಗೊಂಡಿದ್ದಾರೆ.
ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಉತ್ತಮ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
Video: Screams, Prayers As Saudi Amusement Park Ride Crashes On Camera https://t.co/LFSKXq80Bq pic.twitter.com/qMFdMMBGTZ
— NDTV WORLD (@NDTVWORLD) July 31, 2025