ಮೈಸೂರು: ಮೈಸೂರಿನಲ್ಲಿ ಘೋರ ಘಟನೆಯೊಂದು ನಡೆದಿದ್ದು, ಪ್ರೀತಿಸಿ ಮದುವೆಯಾದ ಹೆಂಡತಿಯನ್ನೇ ಗಂಡನೊಬ್ಬ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಮೈಸೂರಿನ ಹೆಬ್ಬಾಳದ ಲಕ್ಷ್ಮಿಕಾಂತ ನಗರದಲ್ಲಿ ಕತ್ತು ಕೊಯ್ದು ಪತ್ನಿಯನ್ನು ಕೊಂದು ಪತಿ ಪೊಲೀಸರಿಗೆ ಶರಣಾದ ಘಟನೆ ನಡೆದಿದೆ. ಶ್ರುತಿ ಕೊಲೆಯಾದ ಮಹಿಳೆ. ಪತ್ನಿ ಕೊಲೆ ಮಾಡಿದ ಪತಿ ಅರುಣ್ ಪೊಲೀಸರಿಗೆ ಶರಣಾಗಿದ್ದಾನೆ.
ಕೂರ್ಗಳ್ಳಿ ನಿವಾಸಿ ಶ್ರುತಿ ಮತ್ತು ಚಾಮರಾಜನಗರ ಮೂಲದ ಅರುಣ್ 4 ವರ್ಷದ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯ ನಂತರ ಪೋಷಕರಿಂದ ಶ್ರುತಿ, ಅರುಣ್ ದಂಪತಿ ದೂರವಾಗಿದ್ದರು. ಯಾರ ಸಂಪರ್ಕವಿಲ್ಲದೆ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಸದ್ಯ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಮೈಸೂರಿನ ಹೆಬ್ಬಾಳ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.