ತಿರುಪತಿ : ಮತ್ತೊಂದು ಹೃದಯ ವಿದ್ರಾವಕ ಘಟನೆ ನಡೆದಿದ್ದು, ಹೆತ್ತ ತಾಯಿಯೊಬ್ಬಳು ನವಜಾತ ಶಿಶುವನ್ನು ಮರಳಿನಲ್ಲಿ ಹೂತು ಹಾಕಿದ್ದಾಳೆ.
ಹೌದು, ತಿರುಪತಿ ಜಿಲ್ಲೆಯ ವರದೈಯಪಾಲಂನಲ್ಲಿ ಈ ಒಂದು ಭಯಾನಕ ಘಟನೆ ಬೆಳಕಿಗೆ ಬಂದಿದೆ. ಜನಿಸಿದ ಮಗುವನ್ನು ಮರಳಿನಲ್ಲಿ ಹೂತು ಹಾಕಿದ್ದಾಳೆ. ಮಗುವನ್ನು ಯಾತನೆಯಿಂದ ರಕ್ಷಿಸಬೇಕಾದ ತಾಯಿಯೇ ಈ ಹೇಯ ಕೃತ್ಯ ಎಸಗಿರುವುದು ಸ್ಥಳೀಯವಾಗಿ ಸಂಚಲನ ಮೂಡಿಸಿದೆ.
ಸೋಮವಾರ ಬೆಳಗಿನ ಜಾವ, ಬಸ್ ನಿಲ್ದಾಣದ ಬಳಿಯ ಅಂಗಡಿಯಲ್ಲಿ ಮರಳಿನಲ್ಲಿ ಹೂತು ಹಾಕಲಾಗಿದ್ದ ಮಗುವನ್ನು ನೈರ್ಮಲ್ಯ ಕಾರ್ಮಿಕರು ಕಂಡುಕೊಂಡರು. ಸ್ಥಳೀಯರ ಸಹಾಯದಿಂದ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ಭಾನುವಾರ ರಾತ್ರಿ ಅಪರಿಚಿತ ಯುವತಿಯೊಬ್ಬಳು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಮಗುವನ್ನು ಮರಳಿನಲ್ಲಿ ಹೂತು ಹಾಕಿದ್ದಾಳೆ ಎಂದು ಸ್ಥಳೀಯರು ಶಂಕಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಘಟನೆಯ ತನಿಖೆ ನಡೆಸುತ್ತಿದ್ದಾರೆ.







