ನವದಹಲಿ : ಇತ್ತೀಚೆಗೆ ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕೆಲಸ ಮಾಡುತ್ತಿರುವಾಗಲೇ ಕುಸಿದು ಬಿದ್ದು ಹೃದಯಾಘಾತದಿಂದ ಬ್ಯಾಂಕ್ ನೌಕರನೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬ್ಯಾಂಕ್ ನಲ್ಲೇ ಹೃದಯಾಘಾತದಿಂದ ಕುಸಿದು ಬಿದ್ದು ನೌಕರ ಮೃತಪಟ್ಟ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮೃತ ಬ್ಯಾಂಕ್ ನೌಕರನನ್ನು ಉತ್ತರ ಪ್ರದೇಶದ ಬ್ಯಾಂಕ್ ನೌಕರ ರಾಜೇಶ್ ಕುಮಾರ್ ಶಿಂಧೆ (30) ಎಂದು ಗುರುತಿಸಲಾಗಿದೆ. ಕಚೇರಿಯಲ್ಲಿ ಕೆಲಸ ಮಾಡುವಾಗ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಈ ಘಟನೆಯು ಬ್ಯಾಂಕಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೃತ ನೌಕರ ಮಹೋಬಾದ ಎಚ್ಡಿಎಫ್ಸಿ ಬ್ಯಾಂಕ್ ಶಾಖೆಯಲ್ಲಿ ಕೃಷಿ ಪ್ರಧಾನ ವ್ಯವಸ್ಥಾಪಕರಾಗಿದ್ದರು.
ರಾಜೇಶ್ ಕುಸಿದು ಬೀಳುತ್ತಿದ್ದಂತೆ ಸಹೋದ್ಯೋಗಿಗಳು ತಡಮಾಡದೇ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗಲ ಮಾರ್ಗಮಧ್ಯದಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.
उत्तर प्रदेश : महोबा जिले के HDFC बैंक में मैनेजर राजेश शिंदे (38 वर्ष) की लैपटॉप पर काम करते–करते मौत हो गई। साथियों ने CPR दिया, लेकिन कुछ नहीं हुआ। pic.twitter.com/Xz2ItozDjj
— Sachin Gupta (@SachinGuptaUP) June 26, 2024