ತುಮಕೂರು : ಸರ್ಕಾರಿ ಶಾಲಾ ಕಾಂಪೌಂಡ್ ನಿರ್ಮಾಣಕ್ಕೆ ತಂದಿದ್ದ ಜಲ್ಲಿಕಲ್ಲಿನಲ್ಲಿದ್ದ ಜಿಲೆಟಿನ್ ಕಡ್ಡಿ ಸ್ಪೋಟಗೊಂಡು ವಿದ್ಯಾರ್ಥಿಯ ಬೆರಳು ಕಟ್ ಆಗಿರುವ ಘಟನೆ ನಡೆದಿದೆ.
ಗುಬ್ಬಿ ತಾಲೂಕಿನ ಸಿ.ಎಸ್. ಪುರ ಸಮೀಪದ ಇಡಗೂರಿನಲ್ಲಿ ಬುಧವಾರ ಈ ಘಟನೆ ನಡೆದಿದೆ. ಮೋನೀಶ್ ಗೌಡ (15) ಗಾಯಗೊಂಡ ವಿದ್ಯಾರ್ಥಿ. ಸರ್ಕಾರಿ ಪ್ರೌಢಶಾಲೆಯಲ್ಲಿ 10 ನೇ ತರಗತಿ ವಿದ್ಯಾರ್ಥಿಗಳಿಗೆ ಸ್ಪೆಷಲ್ ಕ್ಲಾಸ್ ನಡೆಸಲಾಗುತ್ತಿತ್ತು. ಈ ವೇಳೆಗೆ ತರಗತಿಗೆ ಆಗಮಿಸಿದ್ದ ಮೋನೀಶ್ ಗೌಡ ಜಿಲೆಟಿನ್ ಕಡ್ಡಿ ಎಳೆದಿದ್ದು, ಈ ವೇಳೆ ಸ್ಪೋಟಗೊಂಡು ವಿದ್ಯಾರ್ಥಿಯ ಬೆರಳುಗಳು ತುಂಡಾಗಿವೆ.