ಕೊಡಗು : ರಾಜ್ಯದಲ್ಲಿ ಮತ್ತೊಂದು ಭೀಕರ ಹತ್ಯಾಕಾಂಡ ನಡೆದಿದ್ದು, ಅಕ್ರಮ ಸಂಬಂಧದ ಶಂಕೆಯಿಂದ ಓರ್ವ ವ್ಯಕ್ತಿ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕುಳುತೋಡು ಗ್ರಾಮದಲ್ಲಿ ಓರ್ವನಿಂದ ನಾಲ್ವರ ಬರ್ಬರ ಹತ್ಯೆಯಾಗಿದೆ. ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ಕತ್ತಿಯಿಂದ ಕತ್ತರಿಸಿ ಕರಿಯ (75), ಗೌರಿ (70), ನಾಗಿ (35) ಹಾಗೂ 7 ವರ್ಷದ ಕಾವೇರಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ನಾಲ್ವರನ್ನು ಹತ್ಯೆ ಮಾಡಿ 35 ವರ್ಷದ ಗಿರೀಶ್ ನಾಪತ್ತೆಯಾಗಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.