ಬೆಂಗಳೂರು : ದೇಶಾದ್ಯಂತ ದೀಪಾವಳಿ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತಿದೆ. ಪಟಾಕಿ ಸಿಡಿತದಿಂದಾಗಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಾಯುಮಾಲಿನ್ಯ ಹೆಚ್ಚಾಗಿದೆ.
ಹೌದು, ಕಳೆದ ವಾರ 50ರ ಆಸುಪಾಸಿನಲ್ಲಿದ್ದ ವಾಯು ಪ್ರಮಾಣ ಎರಡು-ಮೂರು ದಿನಗಳಲ್ಲಿ 100ರ ಗಡಿ ದಾಟಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ ವಾಯು ಗುಣಮಟ್ಟ 50 ಇದ್ದರೆ ಉತ್ತಮ ಗಾಳಿ ಎಂದರ್ಥ. 50-60ರ ಗಡಿಯಲ್ಲಿದ್ದರೆ ಸಾಧಾರಣ ಹಾಗೂ 100-150ರ ಆಸುಪಾಸಿನಲ್ಲಿದ್ದರೆ ಉಸಿರಾಡಲು ಯೋಗ್ಯವಲ್ಲ ಎಂದು ಹೇಳಲಾಗುತ್ತದೆ.
ಸದ್ಯ ಬೆಂಗಳೂರಿನ ಹಲವು ಏರಿಯಾಗಳಲ್ಲಿ ವಾಯುಮಾಲಿನ್ಯ ಹೆಚ್ಚಾಗಿದ್ದು, ಹೆಬ್ಬಾಳ -142 ಎಕ್ಯೂವರೆಗೆ ದಾಖಲಾಗಿದ್ರೆ, ಜಯನಗರದಲ್ಲಿ -124 ಎಕ್ಯೂ, ಬಿಟಿಎಂ ಲೇಔಟ್-130 ಎಕ್ಯೂ, ಬಾಪುಜಿನಗರ-110 ಎಕ್ಯೂ, ಪೀಣ್ಯ-141 ಎಕ್ಯೂ, ಸಿಟಿ ರೈಲ್ವೆ ಸ್ಟೆಷನ್ -84 ಎಕ್ಯೂ, ಜಿಗಣಿ-133 ಎಕ್ಯೂ, ನಿಮ್ಹಾನ್ಸ್ ರಸ್ತೆ 114 ಎಕ್ಯೂ ದಾಖಲಾಗಿದೆ.