ದಾವಣಗೆರೆ : ಉಳುಮೆ ಮಾಡುವಾಗ ಘೋರ ದುರಂತ ಸಂಭವಿಸಿದ್ದು, ಟ್ರ್ಯಾಕ್ಟರ್ ಯಂತ್ರಕ್ಕೆ ಸಿಲುಕಿ ರೈತರೊಬ್ಬರು ಸಾವವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.
ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ದಿದ್ದಿಗೆ ಗ್ರಾಮದಲ್ಲಿ ರೋಟರ್ ಟ್ರ್ಯಾಕ್ಟರ್ ಯಂತ್ರಕ್ಕೆ ಸಿಲುಕಿ ರೈತ ನಾರಪ್ಪ (30) ಮೃತಪಟ್ಟಿದ್ದಾರೆ.
ಉಳುಮೆ ಮಾಡುವ ಸಲುವಾಗಿ ಟ್ರ್ಯಾಕ್ಟರ್ ಬಾಡಿಗೆಗೆ ತರಲಾಗಿತ್ತು. ಉಳುಮೆ ಮಾಡುವ ವೇಳೆ ಚಾಲಕನ ಪಕ್ಕದಲ್ಲಿಯೇ ಕುಳಿತುಕೊಂಡಿದ್ದು, ಆಕಸ್ಮಿಕವಾಗಿ ಯಂತ್ರಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಧಿಸಿದಂತೆ ಬಿಳಿಚೋಡು ಬಿಳಿಚೋರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








