ಮಂಡ್ಯ : ಮಂಡ್ಯದಲ್ಲಿ ಕಂಠ ಪೂರ್ತಿ ಕುಡಿದು BMTC ಚಾಲಕನೊಬ್ಬ ಹುಚ್ಚಾಟ ಮೆರೆದಿರುವ ಘಟನೆ ಮಂಡ್ಯದ ನಗರ KSRTC ಬಸ್ ನಿಲ್ದಾಣದಲ್ಲಿ ತಡರಾತ್ರಿ ಘಟನೆ.
ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿದ್ದ ಸ್ಥಳದಲ್ಲಿ ತಾನು ಧರಿಸಿದ್ದ ಪ್ಯಾಂಟ್ ಶರ್ಟ್ ಕಳಚಿ ಅಸಭ್ಯ ವರ್ತಸಿದ್ದಾರೆ. ಅಲ್ಲದೆ ಅವಾಚ್ಯ ಪದಗಳಿಂದ ಕೂಗಾಡಿ, ಶಿಳ್ಳೆ ಹಾಕಿ ಸ್ಥಳದಲ್ಲಿ ಪುಂಡಾಟ ನಡೆಸಿದ್ದಾರೆ. ಚಾಲಕನ ವರ್ತನೆ ನೋಡಿ ಮಹಿಳಾ ಪ್ರಯಾಣಿಕರು ಮುಜುಗರದಿಂದ ದೂರ ಸರಿದಿದ್ದಾರೆ.
ಚಾಲಕನ ಕಿರಿಕಿರಿಗೆ ಬೇಸತ್ತು ಸ್ಥಳದಲ್ಲಿದ್ದ ಪ್ರಯಾಣಿಕರಿಂದ ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಈತನ ಪುಂಡಾಟದಿಂದ ಬಸ್ ನಿಲ್ದಾಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ವ್ಯಕ್ತಿ ಬೆಂಗಳೂರಿನಲ್ಲಿ BMTC ಚಾಲಕನಾಗಿರುವ ಮಾಹಿತಿ ಲಭ್ಯವಾಗಿದೆ.