ಆಗ್ರ : ಇತ್ತೀಚಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಹೃದಯಾಘಾತದ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಈ ನಡುವೆ ಆಸ್ಪತ್ರೆಗೆ ತಪಾಸಣೆಗೆ ಬಂದ ವೃದ್ಧರೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದ ವಿಡಿಯೋವೊಂದು ವೈರಲ್ ಅಗಿದೆ.
ಆಗ್ರಾದ ಶಹಗಂಜ್ನಲ್ಲಿರುವ ಡಾ. ಹಿಮಾಂಶು ಯಾದವ್ ಅವರ ಚಿಕಿತ್ಸಾಲಯಕ್ಕೆ ಬಂದಿದ್ದ ವೃದ್ಧರೊಬ್ಬರು ಆಸ್ಪತ್ರೆಯಲ್ಲೇ ಕುಸಿದು ಬಿದ್ದಿದ್ದಾರೆ. ಈ ವೇಳೆ ವೈದ್ಯರಿಗೆ ಕೈ ನಾಡಿಮಿಡಿತ ಅರಿವಾಯಿತು, ರೋಗಿಗೆ ಹೃದಯಾಘಾತವಾಗಿದೆ ಎಂದು ಅರಿತ ಕೂಡಲೇ ಚಿಕಿತ್ಸಾಲಯದಲ್ಲಿ ವೈದ್ಯರು ಸಿಪಿಆರ್ ನೀಡುವ ಮೂಲಕ ಅವರ ಜೀವವನ್ನು ಉಳಿಸಿದರು. ಸದ್ಯ ಘಟನೆಯ ವಿಡಿಯೋ ವೈರಲ್ ಆಗಿದೆ.
ಇಡೀ ಘಟನೆ ಕ್ಲಿನಿಕ್ನಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ, ವೃದ್ಧ ರೋಗಿ ತಲೆತಿರುಗುವಿಕೆಯಿಂದ ಬಳಲುತ್ತಿದ್ದರು,ವೃದ್ಧರು ಹೃದಯಾಘಾತದ ಸಮಸ್ಯೆಯಿಂದ ಬಳಲುತ್ತಿದ್ದರು, ವೈದ್ಯರ ಸಮಯಪ್ರಜ್ಞೆಯೇ ವೃದ್ಧ ರೋಗಿಯ ಜೀವವನ್ನು ಉಳಿಸಿತು.
आगरा -डॉक्टर ने पकड़ी हाथ की नब्ज़, मरीज को आया हार्ट अटैक, क्लीनिक में मची भगदड़, CPR देकर बचाई डॉक्टर ने जान
क्लीनिक में लगे सीसीटीवी कैमरे में पूरी घटना कैद, चक्कर आने की शिकायत से परेशान थे बुजुर्ग मरीज
हार्ट ब्लॉक की समस्या से जूझ रहा था बुजुर्ग, डॉक्टर की तत्परता से बची… pic.twitter.com/NlJvbbIG7B
— भारत समाचार | Bharat Samachar (@bstvlive) July 1, 2025