ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಹುಡುಗಿಯರ ಸಂಖ್ಯೆ ಕಡಿಮೆಯಿದ್ದು, ಮದುವೆಯಾಗದ ಎಷ್ಟೋ ಹುಡುಗರ ಹೆತ್ತವರು ಹೆಣ್ಣು ಸಿಗುತ್ತಿಲ್ಲ ಎಂದು ದುಃಖಿಸುತ್ತಿದ್ದಾರೆ. ಹೆಣ್ಣು ಮಗು ಬೇಡ ಎಂದು ಗರ್ಭಪಾತ ಮಾಡಿಸಿಕೊಳ್ಳುವುದು, ಬಡತನ ಹೀಗೆ ಹಲವು ಕಾರಣಗಳಿಂದ ಮಕ್ಕಳ ಜನನ ಅನುಪಾತದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಆದ್ರೆ, ಸಧ್ಯ ಅಧ್ಯಯನವೊಂದರಿಂದ ಶಾಕಿಂಗ್ ಸಂಗತಿ ಹೊರಬಿದ್ದಿದೆ. ಗಂಡು ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಹುಟ್ಟುವ ಮಕ್ಕಳೆಲ್ಲಾ ಹೆಣ್ಣು ಮಕ್ಕಳಾಗುವ ದಿನಗಳು ಬರಲಿವೆ ಎಂಬ ಗುಡುಗಿನ ಸುದ್ದಿಯೊಂದನ್ನ ಇತ್ತೀಚಿನ ಅಧ್ಯಯನವೊಂದು ತಂದಿದೆ. ಈಗಾಗಲೇ ಪ್ರತಿ 10 ಜನರಲ್ಲಿ ಆರರಿಂದ ಏಳು ಹೆಣ್ಣು ಮಕ್ಕಳು ಜನಿಸುತ್ತಿದ್ದಾರೆ. ಕೆಲವೇ ವರ್ಷಗಳಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದ್ದು, ಹೆಣ್ಣುಮಕ್ಕಳೇ ಹುಟ್ಟುತ್ತಾರೆ ಮತ್ತು ಗಂಡು ಮಕ್ಕಳು ಹುಟ್ಟುವುದಿಲ್ಲ ಎಂದಿದೆ ಅಧ್ಯಯನ.
ಕಾರಣವೇನು.?
ಗಂಡು ಮಕ್ಕಳು ಹುಟ್ಟಲು ಕಾರಣವಾಗುವ ‘ವೈ ಕ್ರೋಮೋಸೋಮ್'(‘Y chromosome’) ನಷ್ಟವಾಗುವುದೇ ಇದಕ್ಕೆ ಪ್ರಮುಖ ಕಾರಣ. ಕೆಲವು ಮಿಲಿಯನ್ ವರ್ಷಗಳ ಹಿಂದೆನಿಂದಲು ಈ Y ಕ್ರೋಮೋಸೋಮ್ ಗಾತ್ರದಲ್ಲಿ ಕುಗ್ಗುತ್ತಿದೆ. ಕೆಲವು ಮಿಲಿಯನ್ ವರ್ಷಗಳ ಹಿಂದೆ Y ಕ್ರೋಮೋಸೋಮ್‌ನಲ್ಲಿ 900 ಜೀನ್‌ಗಳಿದ್ದರೆ, ಈಗ ಅವುಗಳ ಸಂಖ್ಯೆ 55ಕ್ಕೆ ಇಳಿದಿದೆ. Y ಕ್ರೋಮೋಸೋಮ್’ಗಳು ಕಡಿಮೆಯಾದಂತೆ, ಗಂಡು ಮಕ್ಕಳ ಜನನದಲ್ಲಿ ಇಳಿಕೆಯಾಗ್ತಿದೆ. ಅಂತೆಯೇ Y ಕ್ರೋಮೋಸೋಮ್’ಗಳು ಸಂಪೂರ್ಣವಾಗಿ ಕಣ್ಮರೆಯಾಗುವ ಅಪಾಯವಿದೆ. ಆಗ ಹೆಣ್ಣು ಮಕ್ಕಳು ಮಾತ್ರ ಹುಟ್ಟುತ್ತಾರೆ ಎಂದು ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‌ನ ಪ್ರೊಸೀಡಿಂಗ್ಸ್’ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಹೇಳಲಾಗಿದೆ.
Y ಕ್ರೋಮೋಸೋಮ್ ಎಂದರೇನು?
ಪುರುಷನಿಂದ ಬಿಡುಗಡೆಯಾದ ವೀರ್ಯವು ಮಹಿಳೆಯ ಅಂಡಾಣುದೊಂದಿಗೆ ಒಂದಾದರೆ, ಅಂಡಾಣು ಭ್ರೂಣವಾಗಿ ಬೆಳೆಯುತ್ತದೆ. ಆದಾಗ್ಯೂ, X ಮತ್ತು Y ವರ್ಣತಂತುಗಳು ಭ್ರೂಣವು ಹೆಣ್ಣು ಅಥವಾ ಗಂಡು ಎಂಬುದನ್ನ ನಿರ್ಧರಿಸುತ್ತದೆ. ಮೊಟ್ಟೆ ಯಾವಾಗಲೂ X ಕ್ರೋಮೋಸೋಮ್ ಹೊಂದಿರುತ್ತದೆ. ಪುರುಷನಿಂದ ಬಿಡುಗಡೆಯಾದ ವೀರ್ಯವು X ಅಥವಾ Y ಕ್ರೋಮೋಸೋಮ್ ಹೊಂದಿರಬಹುದು. ಅಂಡಾಣುವನ್ನು ಫಲವತ್ತಾಗಿಸುವ ವೀರ್ಯವು ಎಕ್ಸ್ ಕ್ರೋಮೋಸೋಮ್ ಹೊಂದಿದ್ದರೆ, ಅದು ಹೆಣ್ಣು ಮಗು ಮತ್ತು ವೈ ಕ್ರೋಮೋಸೋಮ್ ಹೊಂದಿದ್ದರೆ, ಗಂಡು ಮಗು ಜನಿಸುತ್ತದೆ. ಹೆಣ್ಣು ಎರಡು X ವರ್ಣತಂತುಗಳನ್ನ ಹೊಂದಿದ್ದರೆ, ಪುರುಷರಲ್ಲಿ ಒಂದು X ಮತ್ತು ಒಂದು Y ಕ್ರೋಮೋಸೋಮ್ ಇರುತ್ತದೆ. X ಕ್ರೋಮೋಸೋಮ್ Y ಕ್ರೋಮೋಸೋಮ್ಗಿಂತ ದೊಡ್ಡದಾಗಿದೆ. X ಕ್ರೋಮೋಸೋಮ್ ಸುಮಾರು 1,000 ಜೀನ್’ಗಳನ್ನು ಹೊಂದಿದ್ದರೆ, Y ಕ್ರೋಮೋಸೋಮ್ ಕೇವಲ 55 ಜೀನ್’ಗಳನ್ನು ಹೊಂದಿದೆ. X ಕ್ರೋಮೋಸೋಮ್’ನಲ್ಲಿರುವ ಜೀನ್’ಗಳು ಮಗುವಿನ ಪ್ರತಿರಕ್ಷಣಾ ಕಾರ್ಯ, ಮೆದುಳಿನ ಬೆಳವಣಿಗೆ ಮತ್ತು ದೃಷ್ಟಿ ಸೇರಿದಂತೆ ವಿವಿಧ ಕಾರ್ಯಗಳಿಗೆ ಕಾರಣವಾಗಿವೆ. ವೈ ಕ್ರೋಮೋಸೋಮ್ ಮುಖ್ಯವಾಗಿ ಪುರುಷ ಲೈಂಗಿಕ ಬೆಳವಣಿಗೆಯಲ್ಲಿ ಒಳಗೊಂಡಿರುವ ಜೀನ್’ಗಳನ್ನು ಒಳಗೊಂಡಿದೆ.
ಸೃಷ್ಟಿ ಹೇಗೆ ಕೆಲಸ ಮಾಡುತ್ತದೆ?
ಪುರುಷನ ವೀರ್ಯದಲ್ಲಿರುವ Y ಕ್ರೋಮೋಸೋಮ್’ನಲ್ಲಿರುವ ವಂಶವಾಹಿಗಳು ಖಾಲಿಯಾಗುತ್ತಿದ್ದಂತೆ, ಹುಟ್ಟಿದ ಹೆಣ್ಣು ಮಕ್ಕಳು ಯಾರನ್ನು ಮದುವೆಯಾಗಬೇಕು. ಗಂಡು ಮಕ್ಕಳಿಲ್ಲದೆ ಹೇಗೆ.? ಈ ಸೃಷ್ಟಿಯು ನಿಜವಾಗಿ ಹೇಗೆ ಮುಂದುವರಿಯುತ್ತದೆ ಎಂಬುದು ಈಗ ಮುಖ್ಯ ಸಮಸ್ಯೆಯಾಗಿದೆ. ಈ ಸೃಷ್ಟಿ ಮುಂದುವರೆಯಬೇಕಾದ್ರೆ ಗಂಡು, ಹೆಣ್ಣು ಇಬ್ಬರು ಮುಖ್ಯ. ಯಾರೊಬ್ಬರು ಹೆಚ್ಚಲ್ಲ, ಯಾರೊಬ್ಬರು ಕಮ್ಮಿಯಲ್ಲ. ಇಬ್ಬರಲ್ಲಿ ಒಬ್ಬರಿಲ್ಲದಿದ್ರು ಮಾನವ ಜನಾಂಗ ಉಳಿಯುವುದಿಲ್ಲ. ಆದ್ರೆ, ಈ Y ಕ್ರೋಮೋಸೋಮ್’ಗಳು ಕಡಿಮೆಯಾದಂತೆ, ಗಂಡು ಮಕ್ಕಳ ಜನನವೂ ಕಡಿಮೆಯಾಗುತ್ತದೆ. ಹಾಗಾದರೆ ಮುಂದೆ ಹೇಗೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುತ್ತದೆ.
BIGG NEWS : ರಾಜ್ಯಸಭೆಗೆ ’12 ಸದಸ್ಯರು’ ಅವಿರೋಧ ಆಯ್ಕೆ ; ಬಹುಮತದ ಗಡಿ ತಲುಪಿದ ‘NDA’
ನಮ್ಮ ಬಳಿ ‘ಆಪರೇಷನ್ ಕಮಲದ’ ಕುರಿತು ಸಾಕ್ಷಿ ಇದೆ : ಮತ್ತೊಂದು ಸ್ಫೋಟಕ ಹೇಳಿಕೆ ನೀಡಿದ ಶಾಸಕ ಗಣಿಗ ರವಿಕುಮಾರ್!
BREAKING : ಅಟ್ಲಾಂಟಾದಲ್ಲಿ ‘ಡೆಲ್ಟಾ ವಿಮಾನ’ದ ಟೈರ್ ಸ್ಫೋಟ, ಇಬ್ಬರು ದುರ್ಮರಣ, ಇಬ್ಬರಿಗೆ ಗಾಯ