ಹೈದರಾಬಾದ್ : ಹೈದರಾಬಾದ್ ನಗರದ ಹೃದಯ ಭಾಗದಲ್ಲಿರುವ ನೆಕ್ಲೇಸ್ ರಸ್ತೆಯಲ್ಲಿ ಒಂದು ವರ್ಷದ ಹಿಂದೆ ತೆರೆಯಲಾದ ರೈಲ್ ಕೋಚ್ ರೆಸ್ಟೋರೆಂಟ್‌ನ ಬಿರಿಯಾನಿಯಲ್ಲಿ ಜಿರಳೆಗಳು ಕಾಣಿಸಿಕೊಂಡಿದ್ದು, ಗ್ರಾಹಕರು ಆಘಾತಕ್ಕೊಳಗಾಗಿದ್ದರು.
ವಿಜಯ್ ಎಂಬ ವ್ಯಕ್ತಿ ತನ್ನ ಸ್ನೇಹಿತರೊಂದಿಗೆ ಬಿರಿಯಾನಿ ತಿನ್ನಲು ರೆಸ್ಟೋರೆಂಟ್‌ಗೆ ಹೋಗಿದ್ದ.ಅವರು ಬಿರಿಯಾನಿ ಆರ್ಡರ್ ಮಾಡಿದ. ಆದರೆ, ಅವರು ತಂದಿದ್ದ ಬಿರಿಯಾನಿಯಲ್ಲಿ ಅರ್ಧ ತಿಂದ ನಂತರ, ಅದರಲ್ಲಿ ಜಿರಳೆ ಪತ್ತೆಯಾಗಿದೆ. ಇದೇನಿದು ಎಂದು ರೆಸ್ಟೋರೆಂಟ್ ವ್ಯವಸ್ಥಾಪಕರನ್ನು ಕೇಳಿದಾಗ, ಅವರು ಸರಿಯಾದ ಉತ್ತರ ನೀಡಲಿಲ್ಲ ಎಂದು ವರದಿಯಾಗಿದೆ.
ವಿಜಯ್ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ದೂರು ನೀಡಿದರು. ಈ ಹೋಟೆಲ್ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ ಎಂದು ತಿಳಿದುಬಂದಿದೆ.
నెక్లెస్ రోడ్డులోని రైల్ కోచ్ రెస్టారెంట్లో బిర్యానిలో బొద్దింకలు
బిర్యాని తినడానికి తన ఫ్రెండ్స్తో కలిసి రెస్టారెంట్కి వెళ్ళిన విజయ్ అనే వ్యక్తి
సగం బిర్యాని తిన్న తర్వాత బయటపడ్డ బొద్దింక
రెస్టారెంట్ నిర్వాహకులను ప్రశ్నించి.. ఫుడ్ సేఫ్టీ అధికారులకు ఫిర్యాదు చేసిన కస్టమర్స్ pic.twitter.com/T4gjHScnIm
— Telugu Scribe (@TeluguScribe) March 18, 2025