ಬೆಂಗಳೂರು : ಕೇರಳದಲ್ಲಿ ತಯಾರಿಸಿ ರಾಜ್ಯದಲ್ಲಿ ಮಾರಾಟ ಮಾಡುತ್ತಿರುವ ಮಿಕ್ಸ್ಚರ್, ಚಿಪ್ಸ್, ಹಲ್ವಾ, ಮುರುಕು, ಸಿಹಿತಿಂಡಿಗಳ 90 ಮಾದರಿಗಳ ಪಯಕಿ 31 ರಲ್ಲಿ ಕೃತಕ ಬಣ್ಣ ಬಳಕೆ ಪತ್ತೆಯಾಗಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ದೀಪಾವಳಿ ಪ್ರಯುಕ್ತ ಮಾರಾಟ ಮಾಡುತ್ತಿದ್ದ 151 ಮಾದರಿಯ ಸಿಹಿತಿಂಡಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರಲ್ಲಿ 143 ಮಾದರಿಯ ಸಿಹಿತಿಂಡಿಗಳು ಒಳ್ಳೆಯ ಗುಣಮಟ್ಟ ಹೊಂದಿದ್ದರೆ, 9 ಮಾದರಿಯ ಸಿಹಿತಿಂಡಿಗಳಿಗೆ ಕೃತಕ ಬಣ್ಣದ ಲೇಪನ ಮಾಡಲಾಗಿದೆ ಎಂದು ತಿಳಿಸಿದೆ.
90 ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸಲಾಗಿದ್ದು, ಅವುಗಳಲ್ಲಿ 31 ಮಾದರಿಗಳಲ್ಲಿ ಅಲ್ಯು ರಾ ರೆಡ್, ಟಾರ್ಚ್ ರಾಜೈನ್ ಬಣ್ಣಗಳ ಬಳಕೆ ಖಚಿತವಾಗಿದೆ.
ರಾಜ್ಯದಲ್ಲಿ ಚೀನಾದಿಂದ ಸರಬರಾಜು ಆಗುತ್ತಿರುವ ನಿಷೇಧಿತ ಬೆಳ್ಳುಳ್ಳಿ ಮಾರಾಟಗುತ್ತಿದೆ ಎಂಬ ಪ್ರಚಾರದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ 154 ಮಾದರಿ ಬೆಳ್ಳುಳ್ಳಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರಲ್ಲಿ 147 ಮಾದರಿ ಸುರಕ್ಷಿತವಾಗಿದ್ದು, 5 ಮಾದರಿಗಳು ಅಸುರಕ್ಷಿತ ಎಂದು ವರದಿಯಾಗಿದೆ.