ಬೆಂಗಳೂರು : ರಾಜ್ಯದಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಈ ನಡುವೆ ತರಗತಿಯಲ್ಲಿ ಕುಳಿತಿದ್ದ 17 ವರ್ಷದ ವಿದ್ಯಾರ್ಥಿಯೊಬ್ಬ ಕುಸಿದುಬಿದ್ದು ಹೃದಯಾಘಾತದಿಂದ ಮೃತಪಟ್ಟಿದ್ದಾನೆ.
ಹೌದು, ಹುಬ್ಬಳ್ಳಿಯಲ್ಲಿ ಜೆಜಿ ಕಾಮರ್ಸ್ ಕಾಲೇಜಿನಲ್ಲಿ ರಾಹುಲ್ (17)ಬುಧವಾರ ತರಗತಿಯಲ್ಲಿ ಕುಳಿತ್ತಿದ್ದಾಗ ಏಕಾಏಕಿ ಕುಸಿದು ಬಿದ್ದಿದ್ದು, ಸಿಬ್ಬಂದಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಮಾರ್ಗ ಮಧ್ಯಯೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.
ರಾಜ್ಯದಲ್ಲಿ ಹೃದಯಾಘಾತಕ್ಕೆ ಬಲಿಯಾಗುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಬುಧವಾರ ಹಾವೇರಿಯಲ್ಲಿ ಇಬ್ಬರು, ಹಾಸನ, ಹುಬ್ಬಳ್ಳಿ, ಚಾಮರಾ ಜನಗರ, ಬೆಂಗಳೂರು ಹೊರವಲಯದ ಹೊಸಕೋಟೆಯಲ್ಲಿ ತಲಾ ಒಬ್ಬರು ಸೇರಿ 6 ಮಂದಿ ಮೃತಪಟ್ಟಿದ್ದಾರೆ.
ಹಾಸನದ ಮುಟ್ಟನಹಳ್ಳಿಯಲ್ಲಿ ಮನೆ ಮುಂದೆ ಕುಳಿತಿದ್ದ ರೈತ ಸಣ್ಣಪ್ಪ ಕುಳಿತಲ್ಲೇ ಹೃದಯಾಘಾತದಿಂದ ಮೃಟಪಟ್ಟಿದ್ದಾರೆ.. ಹಾವೇರಿಯ ಹಾನಗಲ್ ನ ಅಕ್ಕಿಆಲೂರಿನ ನಿಂಗಪ್ಪ ಆಸ್ಪತ್ರೆಗೆ ಹೋಗುವಾಗ ಮೃತಪಟ್ಟಿದ್ದಾರೆ. ಹಾವೇರಿಯ ಗೀತಾ ಹೊಸಕೋಟೆಕೋನಪ್ಪ ಹೃದಯಾಘಾತಕ್ಕೊಳಗಾಗಿ ತಪಾಸಣೆಗೆ ಆಸ್ಪತ್ರೆಗೆ ಬಂದಾಗ ಕುಸಿದು ಸಾವನ್ನಪ್ಪಿದ್ದಾರೆ.