ಪುಣೆ : ಪುಣೆಯಲ್ಲಿ ಪೋರ್ಷೆ ಸ್ಪೋರ್ಟ್ಸ್ ಕಾರು ದುರಂತದ ಬಳಿಕ ಮತ್ತೊಂದು ಘಟನೆ ಸಂಬಂಧಿಸಿದ್ದು, ಅಪ್ಪನ ಕಾರುನ್ನು ತೆಗೆದುಕೊಂಡ ಬಾಲಕನೊಬ್ಬ ಯದ್ವಾತದ್ವಾ ಕಾರು ಓಡಿಸಿ ಮಹಿಳೆಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಾಲಕನೊಬ್ಬ ತನ್ನ ತಂದೆಯ ಕಾರನ್ನು ತೆಗೆದುಕೊಂಡು ರಸ್ತೆಗಿಳಿದಿದ್ದಾನೆ. ಆದರೆ ಡ್ರೈವಿಂಗ್ ಬಾರದ ಹಿನ್ನೆಲೆಯಲ್ಲಿ ಯದ್ವಾತದ್ವಾ ಕಾರು ಓಡಿಸಿ ಬಳಿಕ ರಸ್ತೆಯಲ್ಲೇ ಮಹಿಳೆಗೆ ಡಿಕ್ಕಿ ಹೊಡೆದಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Viral Video: Another viral video from #Pune shows a heated argument between local residents and a white car driver, who was seen speeding away from the scene. The incident was captured near Alandi, close to #VadgaonGhenand. pic.twitter.com/TPWDVE42Es
— Punekar News (@punekarnews) June 17, 2024
ಪುಣೆಯ ಆಳಂಡಿಯಲ್ಲಿ ನಡೆದ ಈ ಭಯಾನಕ ಘಟನೆ ಎಲ್ಲರನ್ನು ಬೆಚ್ಚಿ ಬೀಳಿಸಿದೆ. ಈ ಘಟನೆಯಲ್ಲಿ, 17 ವರ್ಷದ ಇನ್ನೊಬ್ಬ ಬಾಲಕ ಕಾರು ಚಲಾಯಿಸಿ ಮಹಿಳೆಗೆ ಡಿಕ್ಕಿ ಹೊಡೆದಿದ್ದಾನೆ.