ಉತ್ತರ ಕನ್ನಡ : ಬೇಯಿಸುತ್ತಿದ್ದ ಗಂಜಿ ಪಾತ್ರೆಗೆ ಬಿದ್ದು 2 ವರ್ಷದ ಮಗು ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನಲ್ಲಿ ನಡೆದಿದೆ.
ನಾಯಿಗಳ ಆಹಾರಕ್ಕಾಗಿ ಬೇಯಿಸುತ್ತಿದ್ದ ಗಂಜಿ ಪಾತ್ರೆಗೆ ಬಿದ್ದು ಕೃಷ್ಣ ಲಂಬೋರ್ (2) ಎಂಬ ಮಗು ಮೃತಪಟ್ಟಿದೆ. ಬೀರು ಲಂಬೋರ ಸಾಕಿದ್ದ ನಾಯಿಗಳಿಗೆ ನೀಡಲು ಗಂಜಿ ಬೇಯಿಸುತ್ತಿದ್ದರು. ಈ ವೇಳೆ ಆಟವಾಡುತ್ತಿದ್ದ ಅವರ 2 ವರ್ಷದ ಮಗ ಕುದಿಯುವ ಗಂಜಿ ಪಾತ್ರೆಯಲ್ಲಿ ಬಿದ್ದು ಮೈಸುಕೊಂಡಿದೆ.
ಕೂಡಲು ಗಾಯಗೊಂಡ ಮಗುವನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ.