ಬೆಂಗಳೂರು : ಪನೀರ್, ಕಬಾಬ್ ಬಳಿಕ ಜಿಲೇಬಿ, ಶರಬತ್ತು ಸರದಿ, ಜಿಲೇಬಿ, ಶರಬತ್ತಿನಲ್ಲಿ ಕೃತಕ ಕಲರ್, ಕಲುಷಿತ ನೀರು ಬಳಕೆ ಮಾಡುತ್ತಿರುವ ಶಾಕಿಂಗ್ ವಿಚಾರ ಬಯಲಾಗಿದೆ.
ಹೌದು, ಕಲಬರಕೆ ಸಂಬಂಧ ಜಿಲೇಬಿ, ಶರಬತ್ ಮಾದರಿ ಸಂಗ್ರಹಕ್ಕೆ ಆಹಾರ ಇಲಾಖೆ ಮುಂದಾಗಿದ್ದು, ಪ್ರತಿ ಜಿಲೆಯಲ್ಲೂ ತಲಾ 5 ಮಾದರಿ ಸಂಗ್ರಹಿಸುವಂತೆ ಸೂಚನೆ ನೀಡಿದೆ. ಹೀಗಾಗಿ ವರದಿ ಮೇಲೆ ಜಿಲೇಬಿ ವ್ಯಾಪಾರಿಗಳು ಕಣ್ಣಿಟ್ಟು ಕೂತಿದ್ದಾರೆ.
ಜಿಲೇಬಿಗೆ ಕೃತಕ ಬಣ್ಣ ಬಳಕೆ ಬಳಸುತ್ತಿರುವುದು ಕಂಡು ಬಂದಿದ್ದು, ಆಹಾರ ಗುಣಮಟ್ಟ ಇಲಾಖೆ ಗಮನಕ್ಕೆ ಬಂದಿದೆ. ಜೊತೆಗೆ ದಣಿವಾರಿಸುವ ಶರಬತ್ತಿನಲ್ಲೂ ಕೃತಕ ಬಣ್ಣ ಹಾಗೂ ಕಲುಷಿತ ನೀರು ಬಳಸಲಾಗುತ್ತಿದೆ ಎಂದು ತಿಳಿದುಬಂದಿದೆ. ಸಕ್ಕರೆ ಮಿಶ್ರಿತ ನೀರನ್ನು ಮುಚ್ಚಿದ ಡಬ್ಬಿಯಲ್ಲಿಸಿದ್ರೆ ಕುಲುಷಿತವಾಗಲಿದೆ ಎನ್ನಲಾಗಿದೆ.