ಮಂಡ್ಯ : ಮಂಡ್ಯ ಜಿಲ್ಲೆಯಲ್ಲಿ ಅಕ್ರಮ ಸಂಬಂಧಕ್ಕೆ ಯುವಕನೊಬ್ಬನನ್ನು ಜೊತೆಗಿದ್ದ ಸ್ನೇಹಿತನೇ ಕೊಲೆ ಮಾಡಿರುವ ಘಟನೆ ನಡೆದಿದೆ.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಿಕನಕುರುಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಯುವಕನ ಜೊತೆಯಲ್ಲಿದ್ದ ಸ್ನೇಹಿತರಿಂದಲೇ ಬರ್ಬರ ಹತ್ಯೆ ನಡೆದಿದೆ. ನಾಗಮಂಗಲ ತಿರುಮಲಾಪುರ ಗ್ರಾಮದ ಅರವಿಂದ್ (23) ಬರ್ಬರವಾಗಿ ಕೊಲೆಯಾದ ಯುವಕ. ಈತ ತನ್ನ ಸ್ನೇಹಿತರ ಜೊತೆ ಚಿನಕುರುಳಿ ಗ್ರಾಮದ ಕುಮಾರ್ ಎಂಬುವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ರಾತ್ರಿ ಸ್ನೇಹಿತರ ಜೊತೆ ಮದ್ಯ ಸೇವಿಸಿ ಮಲಗಿದ್ದ ಮೃತ ಅರವಿಂದ್. ಆತನ ಜೊತೆಯಲ್ಲಿ ಮಲಗಿದ್ದ ಸ್ನೇಹಿತರಾದ ವಿಜಯ್ ಹಾಗು ಏಳುಮಲೈ ಎಂಬುವರು ಹತ್ಯೆ ಮಾಡಿದ್ದಾರೆ.
ಸುತ್ತಿಗೆಯಿಂದ ಅರವಿಂದನಿಗೆ ಹೊಡೆದು ಹತ್ಯೆ ಮಾಡಲಾಗಿದ್ದು, ಕೊಲೆ ಮಾಡಿರುವ ಇಬ್ಬರು ಕೂಡ ಅರವಿಂದ್ ನ ಸ್ವಗ್ರಾಮ ತಿರುಮಲಾಪುರದವರು. ಸ್ಥಳಕ್ಕೆ ಪಾಂಡವಪುರ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಹತ್ಯೆ ಮಾಡಿದ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನದ ವಶಕ್ಕೆ. ತನ್ನ ಪತ್ನಿಯ ಜೊತೆ ಅಕ್ರಮ ಸಂಬಂಧಕ್ಕೆ ಹೊಂದಿದ್ದರಿಂದ ಕೊಲೆ ಮಾಡಿರುವುದಾಗಿ ಹೇಳಿಕೆ. ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ.