ಚಾಮರಾಜನಗರ : ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ಬೆಳಕಿಗೆ ಬಂದಿದ್ದು, ಹಳೇ ದ್ವೇಷಕ್ಕೆ ಮಹಿಳೆಯರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾದ ಘಟನೆ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಸವಪುರ ಗ್ರಾಮದಲ್ಲಿ ಈ ಕೃತ್ಯ ನಡೆದಿದ್ದು, ಜ್ಯೋತಿ ಹಾಗೂ ಪೂರ್ಣಿಮಾ ಎಂಬುವವರ ಮೇಲೆ ಕಬ್ಬಿಣದ ರಾಡ್ ಹಾಗೂ ಕಲ್ಲುಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ಬಸವಪುರ ನಿವಾಸಿಗಳಾದ ಶಿವು ಹಾಗೂ ದರ್ಶನ್ ಎಂಬುವವರು ಈ ಹಲ್ಲೆ ನಡೆಸಿದ್ದಾರೆ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
2 ವರ್ಷದ ಹಿಂದೆ ಜ್ಯೋತಿಯನ್ನು ಇವರು ಚುಡಾಯಿಸಿದ್ದರು. ಈ ವಿಚಾರವಾಗಿ ಊರಿನ ದೊಡ್ಡವರು ಪಂಚಾಯಿತಿ ನಡೆಸಿದ್ದರು. ಈ ದ್ವೇಷದ ಹಿನ್ನೆಲೆ ಶಿವು ಹಾಗೂ ದರ್ಶನ್ ಏಕಾಏಕಿ ಗುಂಪು ಕಟ್ಟಿಕೊಂಡು ಬಂದು ಜ್ಯೋತಿ ಹಾಗೂ ಪೂರ್ಣಿಮಾ ಎಂಬುವವರ ಮೇಲೆ ಕಬ್ಬಿಣದ ರಾಡ್ ಹಾಗೂ ಕಲ್ಲುಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.