ಶಿವಮೊಗ್ಗ : ರಾಜ್ಯದಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಬಟ್ಟೆ ಒಗೆಯಲು ಹೋದ ಒಂದೇ ಕುಟುಂಬದ ನಾಲ್ವರು ಭದ್ರಾ ನಾಲೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆ ಹೊಳೆಹೊನ್ನೂರು ಸಮೀಪದ ಅರಬಿಳಚಿ ಗ್ರಾಮದಲ್ಲಿ ಬಟ್ಟೆ ಒಗೆಯುವ ಸಂದರ್ಭದಲ್ಲಿ ಕಾಲು ಜಾರಿ ಭದ್ರಾ ನಾಲೆಗೆ ಬಿದ್ದು, ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಈವರೆಗೂ ಶವ ಪತ್ತೆಯಾಗಿಲ್ಲ.
ಅರೆಬಳಚಿ ಗ್ರಾಮದ ನೀಲಾಬಾಯಿ (50), ಮಗ ರವಿಕುಮಾರ್ (23), ಮಗಳು ಶ್ವೇತಾ (24),ಅಳಿಯ ಪರಶುರಾಮ (28) ನೀರು ಪಾಲಾದವರು. ಬಟ್ಟೆ ತೊಳೆಯುವಾಗ ನೀಲಾಬಾಯಿ,ಶ್ವೇತಾ ಕಾಲು ಜಾರಿ ನಾಲೆಗೆ ಬಿದ್ದರು. ತಕ್ಷಣವೇ ರಕ್ಷಿಸಲು ಮಗ ರವಿಕುಮಾರ್ ಮತ್ತು ಅಳಿಯ ಪರಶುರಾಮ್ ನಾಲೆಗೆ ಧುಮುಕಿದ್ದಾರೆ.








