ಬೆಳಗಾವಿ : ರಾಜ್ಯದಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಬೀದಿ ನಾಯಿಗೆ ಹೆದರಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಅಥಣಿ ಪಟ್ಟಣದಲ್ಲಿ ನಡೆದಿದೆ.
ಅಥಣಿ ಪಟ್ಟಣದ ಕುಂಬಾರ ಗಲ್ಲಿಯಲ್ಲಿ ವಿಶ್ವನಾಥ್ ಶಿರೋಳ (45) ಮೃತಪಟ್ಟಿದ್ದಾರೆ. ಸಾಮಾನ್ಯವಾಗಿ ಬೈಕ್ ಅಪಘಾತ ಎಂದು ಪೊಲೀಸರು ಸುಮ್ಮನಾಗಿದ್ದರು. ಆದರೆ ಸಿಸಿಟಿಯಲ್ಲಿ ಪರಿಶೀಲಿಸದಾಗ ಬೀದಿ ನಾಯಿಗೆ ಹೆದರಿ ಬೈಕ್ ಸವಾರ ಸಾವನ್ನಪ್ಪಿರುವುದು ತಿಳಿದುಬಂದಿದೆ.
ಜನವರಿ 15ರಂದು ಈ ಘಟನೆ ನಡೆದಿದು, ವಿಶ್ವನಾಥ್ ಅವರು ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಬೀದಿ ನಾಯಿ ಬೆನ್ನಟ್ಟಿದ್ದು, ಈ ವೇಳೆ ಗೋಡೆಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಅವರು ಮೃತಪಟ್ಟಿದ್ದಾರೆ.








