ಬೆಂಗಳೂರು : ರಾಜ್ಯದಲ್ಲಿ ಹೃದಯಾಘಾತ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ನಿನ್ನೆ ಒಂದೇ ದಿನ ಓರ್ವ ಬಾಲಕ ಸೇರಿದಂತೆ 8 ಜನರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಹೃದಯಾಘಾತದಿಂದ ಗೂಡ್ಸ್ ವಾಹನ ಚಾಲಕ ಸಾವು
ಬೆಳಗಾವಿ ಜಿಲ್ಲೆಯ ಸೌದತ್ತಿ ಪಟ್ಟಣದ ಎಪಿಎಂಸಿಯಲ್ಲಿ ಆವರಣದಲ್ಲಿ ಈ ಒಂದು ಘಟನೆ ನಡೆದಿದ್ದು, ಹೃದಯಾಘಾತದಿಂದ ಅಶೋಕ್ ಜೀರಿಗವಾಡ (40) ಎನ್ನುವ ವ್ಯಕ್ತಿ ಸಾವನಪ್ಪಿದ್ದಾರೆ. ಮೃತ ಅಶೋಕ್ ಸೌದತ್ತಿ ತಾಲೂಕಿನ ಚಿಕ್ಕ ಉಳ್ಳಿಗೇರಿ ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ. ಸೌದತಿ ಪಟ್ಟಣದ ಎಪಿಎಂಸಿ ಮಾರುಕಟ್ಟೆಗೆ ಅಶೋಕ್ ಹೆಸರು ಕಾಳು ತಂದಿದ್ದರು. ಈ ವೇಳೆ ಎದೆನೋವಿನಿಂದ ಕುಸಿದು ಬಿದ್ದು ಚಾಲಕ ಅಶೋಕ್ ಸಾವನಪ್ಪಿದ್ದಾರೆ. ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾವಣಗೆರೆಯಲ್ಲಿ 22 ವರ್ಷದ ಯುವಕ ಸಾವು
ದಾವಣಗೆರೆಯಲ್ಲಿ ಹೃದಯಾಘಾತದಿಂದ 22 ವರ್ಷದ ಯುವಕ ಮೃತಪಟ್ಟಿದ್ದಾನೆ. ಉದ್ಯಮಿ ರೇಖಾ ಮುರುಗೇಶ್ ಅವರ ಪುತ್ರ ಅಕ್ಷಯ್ ಮೃತಪಟ್ಟ ಯುವಕ ಎಂದು ತಿಳಿದುಬಂದಿದೆ. ಮನೆಯಲ್ಲಿ ಏಕಾಏಕಿ ಕುಸಿದು ಬಿದ್ದ ಅಕ್ಷಯ್ ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.
ಕನಕಪುರದಲ್ಲಿ 38 ವರ್ಷದ ವ್ಯಕ್ತಿ ಸಾವು
ಇನ್ನು ಕನಕಪುರ ತಾಲೂಕಿನ ಕೊಗ್ಗೆ ದೊಡ್ಡಿ ಗ್ರಾಮದ 38 ವರ್ಷದ ಮಾದೇಶ್ ನಾಯ್ಕ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮಾದೇಶ್ ನಾಯ್ಕ್ ಫಾರೆಸ್ಟ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು.ಇ ವೇಳೆ ಏಕಾಏಕಿ ಹೃದಯಾಘಾತದಿಂದ ಕುಸಿದು ಬಿದ್ದು ಮಾದೇಶ್ ನಾಯಕ್ ಸಾವನಪ್ಪಿದ್ದಾರೆ.
ಧಾರವಾಡದಲ್ಲಿ ಯುವತಿ ಸಾವು
ಧಾರವಾಡದಲ್ಲಿ 25 ವರ್ಷದ ಯುವತಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಪುರೋಹಿತ ನಗರದ ಜೀವಿತಾ ಕುಸಗೂರು ಸಾವನ್ನಪ್ಪಿದ್ದಾರೆ. ಈಕೆ ಯುಪಿಎಸ್‌ಸಿ ಪರೀಕ್ಷೆ ಕನಸು ಕಂಡಿದ್ದು, ಐಎಎಸ್ ಅಧಿಕಾರಿ ಆಗುವ ಕನಸು ಹೊತ್ತಿದ್ದಳು.ಆದರೆ ದುರಾದೃಷ್ಟವಶಾತ್ ಹೃದಯಾಘಾತಕ್ಕೆ ಇಂದು ಬಲಿಯಾಗಿದ್ದಾಳೆ.
ಕಲಬುರಗಿಯಲ್ಲಿ 22 ವರ್ಷದ ನವವಿವಾಹಿತ ಯುವಕ ಬಲಿ
ಕಲಬುರಗಿಯಲ್ಲಿ ಹೃದಯಾಘಾತದಕ್ಕೆ ಯುವಕ 22 ವರ್ಷದ ಮೊಹಸೀನ್ ಪಟೇಲ್ ಬಲಿಯಾಗಿದ್ದಾರೆ. ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಚಂದನಕೇರಾ ಗ್ರಾಮದಲ್ಲಿ ಮನೆಯಲ್ಲಿ ಕುಸಿದು ಬಿದ್ದ ಮೊಹಸೀನ್ ಪಟೇಲ್ ಮೃತಪಟ್ಟಿದ್ದಾರೆ. ಕಳೆದ ಒಂದು ವಾರದ ಹಿಂದೆ ಅಷ್ಟೇ ವಾಸಿನ್ ಪಟೇಲ್ ವಿವಾಹ ವಾಗಿದ್ದರು ಆದರೆ ಒಂದೇ ವಾರದಲ್ಲಿ ಹೃದಯಘಾತದಿಂದ ಸಾವನ್ನಪ್ಪಿದ್ದು ಕುಟುಂಬಸ್ಥರಿಗೆ ಆಘಾತ ಉಂಟು ಮಾಡಿದೆ.
ಪಾಠ ಕೇಳುವಾಗಲೇ ‘ಹೃದಯಘಾತದಿಂದ’ ವಿದ್ಯಾರ್ಥಿ ಸಾವು!
ಹೌದು ಪಾಠ ಕೇಳುವಾಗಲೇ ಹೃದಯಾಘಾತದಿಂದ ವಿದ್ಯಾರ್ಥಿ ಸಾವನಪ್ಪಿದ್ದಾನೆ. ಕುರುಬಗೆರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಒಂದು ಘಟನೆ ನಡೆದಿದ್ದು, ಚಾಮರಾಜನಗರ ಗುಂಡ್ಲುಪೇಟೆ ತಾಲೂಕಿನ ಕುರುಬಗೆರಿ ಎಂಬಲ್ಲಿ ನಾಲ್ಕನೇ ತರಗತಿ ವಿದ್ಯಾರ್ಥಿ 10 ವರ್ಷದ ಮನೋಜ್ ಕುಮಾರ್ ಸಾವನಪ್ಪಿದ್ದಾನೆ. ಪಾಠ ಕೇಳುತ್ತಿದ್ದಾಗ ಕುಸಿದು ಬಿದ್ದು ಮನೋಜ್ ಸಾವನಪ್ಪಿದ್ದಾನೆ. ಈತ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ. ಅಲ್ಲದೇ ಹೃದಯದಲ್ಲಿ ರಂದ್ರ ಕೂಡ ಇತ್ತು ಎಂಬ ಮಾಹಿತಿ ತಿಳಿದು ಬಂದಿದೆ. ಬೆಂಗಳೂರಿನ ಜಯದೇವ ಮತ್ತು ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೂಡ ಪಡೆದಿದ್ದ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ದನ ಮೇಯಿಸಲು ತೆರಳಿದಾಗಲೇ ಹೃದಯಾಘಾತ!
ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಮತ್ತೊಬ್ಬ ಯುವಕ ಬಲಿಯಾಗಿದ್ದು, ಹೃದಯಾಘಾತದಿಂದ ಗೊಲ್ಲರದೊಡ್ಡಿ ನಿವಾಸಿ ಗಿರೀಶ್ (25) ಇದೀಗ ಸಾವನಪ್ಪಿದ್ದಾನೆ. ದನ ಮೇಯಿಸಲು ತಳ್ಳಿದ್ದಾಗ ಗಿರೀಶ್ ಹೃದಯಘಾರದಿಂದ ಸವನ್ನಪಿದ್ದಾನೆ. ಕಳೆದ ಮೂರು ದಿನಗಳಿಂದ ಗಿರೀಶ್ ಗೆ ಎದೆ ನೋವು ಕಾಣಿಸಿಕೊಂಡಿತ್ತು. ಇದೀಗ ಇಂದು ಹಾರ್ಟ್ ಅಟ್ಯಾಕ್ ಗೆ ಗಿರೀಶ್ ಬಲಿಯಾಗಿದ್ದಾನೆ.