ಕೆಎನ್ಎನ್‍ಡಿಜಟಲ್ ಡೆಸ್ಕ್ : ಚೀನಾದ ಶೆನ್‌ಜೆನ್’ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಒಬ್ಬ ವ್ಯಕ್ತಿ ತನ್ನ ಮುಖದ ಮೇಲೆ ಬಂದು ಕೂತ ನೊಣವನ್ನ ಕೊಂದು ಕಣ್ಣು ಕಳೆದುಕೊಂಡಿದ್ದಾನೆ. ಕಣ್ಣಿಗೆ ಸೋಂಕು ತಗುಲಿ ಮೆದುಳಿಗೆ ತಲುಪುವ ಸಾಧ್ಯತೆ ಇದ್ದಿದ್ದರಿಂದ ಎಡಗಣ್ಣಿನ ಗುಡ್ಡೆಯನ್ನ ತೆಗೆಯಬೇಕಾಯಿತು. ಮೇನ್‌ಲ್ಯಾಂಡ್ ವರದಿಗಳು ಕೀಟವನ್ನ ಡ್ರೈನ್ ಫ್ಲೈ ಎಂದು ಗುರುತಿಸಿದ್ದು, ಇದು ಅತ್ಯಂತ ಅಪಾಯಕಾರಿ ಕೀಟ ಎನ್ನಲಾಗ್ತಿದೆ.
ಗುವಾಂಗ್‌ಡಾಂಗ್ ಪ್ರಾಂತ್ಯದ ಶೆನ್‌ಜೆನ್’ನಲ್ಲಿ ವೂ ಎಂಬ ವ್ಯಕ್ತಿಯ ಮುಖದ ಮೇಲೆ ನೊಣ ಕೂತಿದೆ. ಕಿರಿಕಿರಿಗೊಂಡು ನೊಣವನ್ನ ಕೊಂದಿದ್ದು, ಒಂದು ಗಂಟೆಯ ನಂತರ ಅವನ ಎಡಗಣ್ಣು ಕೆಂಪಾಯಿತು. ತೀವ್ರ ನೋವಿನಿಂದ ಆತ ವೈದ್ಯರನ್ನು ಸಂಪರ್ಕಿಸಿದ. ವೈದ್ಯರು ಆರಂಭದಲ್ಲಿ ಕಾಲೋಚಿತ ಕಾಂಜಂಕ್ಟಿವಿಟಿಸ್ ರೋಗನಿರ್ಣಯ ಮಾಡಿದರು. ಚಿಕಿತ್ಸೆಯ ಹೊರತಾಗಿಯೂ ಕಣ್ಣಿನ ಸುತ್ತಲಿನ ಪ್ರದೇಶದಲ್ಲಿ ಹುಣ್ಣು ರೂಪುಗೊಂಡಿತು.
ಔಷಧಗಳನ್ನು ಸೇವಿಸಿದ ನಂತರವೂ ವೂ ಸ್ಥಿತಿ ಹದಗೆಟ್ಟಿತು. ಕಣ್ಣಿನ ಸೋಂಕು ಹೆಚ್ಚಾಗುತ್ತಿರುವುದನ್ನ ವೈದ್ಯರು ಗಮನಿಸಿದ್ದಾರೆ. ವೂ ಮೆದುಳಿಗೂ ಸೋಂಕು ಹರಡಿದ್ದು, ವೈದ್ಯರು ಎಡ ಕಣ್ಣುಗುಡ್ಡೆಯನ್ನ ತೆಗೆದುಹಾಕಿದರು.
ಅಂದ್ಹಾಗೆ, ವೂ ತನ್ನ ದೃಷ್ಟಿ ಕಳೆದುಕೊಳ್ಳಲು ಕಾರಣ ಡ್ರೈನ್ ಫ್ಲೈ.. ಇದರ ಲಾರ್ವಾಗಳು ನೀರಿನಲ್ಲಿ ವಾಸಿಸುತ್ತವೆ ಎಂದು ಹೇಳಲಾಗುತ್ತದೆ. ಇದು ಸ್ನಾನಗೃಹಗಳು, ಅಡಿಗೆಮನೆಗಳು, ಸಿಂಕ್’ಗಳಂತಹ ತೇವ, ಕತ್ತಲೆಯಾದ ಸ್ಥಳಗಳಲ್ಲಿ ವಾಸಿಸುತ್ತದೆ. ಕಣ್ಣುಗಳಿಗೆ ಕೀಟಗಳು ಬಂದಾಗ ಜಾಗರೂಕರಾಗಿರಿ ಎಂದು ತಜ್ಞರು ಎಚ್ಚರಿಸುತ್ತಾರೆ.
Alcohol Facts : ನೀವು ಕುಡಿಯುವ ‘ಆಲ್ಕೋಹಾಲ್’ ವೆಜ್ ಅಥ್ವಾ ನಾನ್-ವೆಜ್’.? ಮದ್ಯಪ್ರಿಯರಿಗೂ ಇದು ತಿಳಿದಿಲ್ಲ!
Good News: ರಾಜ್ಯದಲ್ಲಿ 18,000 ಅಂಗನವಾಡಿಯಲ್ಲಿ ‘LKG, UKG ಶಾಲೆ’ ಆರಂಭ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
Fact Check : ಮಮತಾ ಬ್ಯಾನರ್ಜಿ ಮಾತನಾಡುವಾಗ ‘ಮೈಕ್ ಆಫ್’ ಮಾಡಲಾಯ್ತಾ.? ಇಲ್ಲಿದೆ, ‘PIB’ ತಿಳಿಸಿದ ಫ್ಯಾಕ್ಟ್!