ಹೈದರಾಬಾದ್: ತೆಲಂಗಾಣದ ಸಂಗರೆಡ್ಡಿಯಲ್ಲಿರುವ ಹಾಸ್ಟೆಲ್ ನಲ್ಲಿ ನಿಯೋಜಿತರಾಗಿದ್ದ ಪಾನಮತ್ತ ಕಾವಲುಗಾರನೊಬ್ಬ ವಿದ್ಯಾರ್ಥಿಗಳಿಗೆ ಸಿದ್ಧಪಡಿಸಿದ ಅನ್ನದಲ್ಲಿ ಕಾಲು ಇಟ್ಟುಕೊಂಡು ಮಲಗಿರುವುದು ಕಂಡುಬಂದಿದೆ.
ಇಸ್ಮಾಯಿಲ್ ಖಾನ್ಪೇಟೆ ಪ್ರದೇಶದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಊಟಕ್ಕೆ ಮೆಸ್ ಗೆ ಬಂದ ವಿದ್ಯಾರ್ಥಿಗಳು, ಕಾವಲುಗಾರ ಅಕ್ಕಿ ಇರುವ ಪಾತ್ರೆಯೊಳಗೆ ಕಾಲು ಇಟ್ಟುಕೊಂಡು ಮಲಗಿರುವುದನ್ನು ನೋಡಿ ಆಘಾತಕ್ಕೊಳಗಾದರು.
ಕಾಲೇಜು ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಕಾವಲುಗಾರನನ್ನು ಎಬ್ಬಿಸಲು ಪ್ರಯತ್ನಿಸಿದರು, ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಘಟನೆಯ ನಂತರ, ಕಾವಲುಗಾರನನ್ನು ವಜಾಗೊಳಿಸಲಾಯಿತು.








