ಮುಂಬೈ : ತನ್ನ ಜನ್ಮದಿನದಂದು ತನ್ನ ತಾಯಿ ಮೊಬೈಲ್ ಫೋನ್ ಕೊಡಿಸಲಿಲ್ಲ ಎಂಬ ಕಾರಣಕ್ಕೆ 15 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ.
ವಿಶ್ವಜೀತ್ ರಮೇಶ್ ಚಮ್ದನವಾಲೆ ತನ್ನ ತಾಯಿ ಮತ್ತು ಸಹೋದರಿ ಮಲಗಿದ್ದಾಗ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಎರಡು ದಿನಗಳ ಹಿಂದೆ ವಿಶ್ವಜೀತ್ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾನೆ ಮತ್ತು ತನ್ನ ತಾಯಿಗೆ ಮೊಬೈಲ್ ಫೋನ್ ಕೇಳಿದ್ದಾನೆ. ಹಣಕಾಸಿನ ಸಮಸ್ಯೆಗಳಿಂದ ತಾಯಿ ಮೊಬೈಲ್ ಕೊಡಿಸಲು ನಿರಾಕರಿಸಿದರು. ಹೀಗಾಗಿ ಮನನೊಂದು ಬಾಲಕ ಮರುದಿನ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.