ತುಮಕೂರು : ಮಲತಂದೆಯೇ 4 ವರ್ಷದ ಮಗುವನ್ನು ಹೊಡೆದು ಕೊಲೆ ಮಾಡಿರುವ ಘಟನೆ ತುಮಕೂರಿನ ಸಿದ್ದಲಿಂಗಯ್ಯಪಾಳ್ಯದಲ್ಲಿ ನಡೆದಿದೆ.
ತುಮಕೂರಿನ ಸಿದ್ದಲಿಂಗಯ್ಯನಪಾಳ್ಯದಲ್ಲಿ ವಿವಾಹಿತೆ ಮಹಿಳೆ ಕಾನ್ಯ ಚಂದ್ರಶೇಖರ್ ಎಂಬುವರ ಜೊತಗೆ ಓಡಿ ಹೋಗಿ ಮದುವೆಯಾಗಿದ್ದರು. ಈ ವೇಳೆ ಕಾವ್ಯ ಗರ್ಭಿಣಿಯಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ ಈ ಮಗು ನನ್ನದಲ್ಲ ಎಂದು ಚಂದ್ರಶೇಖರ್ ಪದೇ ಪದೇ ಜಗಳ ಮಾಡುತ್ತಿದ್ದ ಎನ್ನಲಾಗಿದೆ.
ಕೆಲ ದಿನಗಳ ಹಿಂದೆ ಮಗುವನ್ನು ಹೊಡೆದು ಕೊಂದು ಬಳಿಕ ಮಗು ಹಾವು ಕಚ್ಚಿ ಸಾವನ್ನಪ್ಪಿದೆ ಎಂದು ಹೇಳಿ ಅಂತ್ಯಸಂಸ್ಕಾರ ಮಾಡಿದ್ದರು. ಆದರೆ ಮಗುವಿನ ಸಾವಿನ ಬಗ್ಗೆ ಸಂಶಯ ಮೂಡಿ ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರು ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಮಗುವಿನ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಆರೋಪಿ ಚಂದ್ರಶೇಖರ್ ರನನ್ನು ಬಂಧಿಸಲಾಗಿದೆ.