ನವದೆಹಲಿ : ದೇಶದಲ್ಲಿ ಕಾಮುಕರ ಅಟ್ಟಹಾಸ ಮುಂದುವರೆದಿದ್ದು, ಆಂಧ್ರಪ್ರದೇಶದಲ್ಲಿ ಕಾಮುಕನೊಬ್ಬ 2 ನೇ ತರಗತಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಬೆಳಕಿಗೆ ಬಂದಿದೆ.
ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ತಾಡಿಗಡಪ ಕಣ್ಣಿನ ಆಸ್ಪತ್ರೆ ಬಳಿ ಎರಡನೇ ತರಗತಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ವೃದ್ಧನನ್ನು ಬಂಧಿಸಲಾಗಿದೆ. ತಾಡಿಗಡಪ ಕಣ್ಣಿನ ಆಸ್ಪತ್ರೆಯ ಬಳಿ ವಾಸಿಸುತ್ತಿರುವ ನಾರಾಯಣ ಎಂಬ ವೃದ್ಧ ಮನೆಯ ಬಳಿ ವಾಸಿಸುತ್ತಿದ್ದ ಎರಡನೇ ತರಗತಿಯ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ನಾಯಿಮರಿಗಾಗಿ ನಾರಾಯಣನ ಮನೆ ಬಳಿ ಹೋದ ಬಾಲಕಿಯೊಂದಿಗೆ ನಾರಾಯಣ ಅನುಚಿತವಾಗಿ ವರ್ತಿಸಿದ್ದಾನೆ. ಬಾಲಕಿ ಅಲ್ಲಿಂದ ತಪ್ಪಿಸಿಕೊಂಡು ಬಂದು ಪೋಷಕರಿಗೆ ವಿಷಯ ತಿಳಿಸಿದ್ದಾಳೆ. ಆದರೆ, ಬಾಲಕಿಯ ಪೋಷಕರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಪೆನಮಲೂರು ಪೊಲೀಸರು ವೃದ್ಧನನ್ನು ವಶಕ್ಕೆ ಪಡೆದಿದ್ದಾರೆ. ಈ ಘಟನೆಯ ಕುರಿತು ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿಯಬೇಕಿದೆ.