ತರಗತಿ ನಡೆಯುವಾಗಲೇ ಶಾಲೆಯಲ್ಲಿ ಭೀಕರ ಅಗ್ನಿ ದುರಂತ ನಡೆದಿದ್ದು, 17 ಮಕ್ಕಳು ಸಜೀವ ದಹನವಾಗಿರುವ ಘಟನೆ ವಾಯುವ್ಯ ನೈಜೀರಿಯಾದ ಇಸ್ಲಾಮಿಕ್ ಶಾಲೆಯಲ್ಲಿ ನಡೆದಿದೆ.
ಬೆಂಕಿ ಅವಘಡದಲ್ಲಿ 17 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಹಲವು ವಿದ್ಯಾರ್ಥಿಗಳು ತೀವ್ರ ಸುಟ್ಟ ಗಾಯಗಳಿಂದ ಬಳಲುತ್ತಿದ್ದಾರೆ. ಬೆಂಕಿಯ ಕಾರಣವನ್ನು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ದೇಶದ ತುರ್ತು ಪ್ರತಿಕ್ರಿಯೆ ಸಂಸ್ಥೆ ಈ ಘಟನೆಯನ್ನು ದೃಢಪಡಿಸಿದೆ. ಝಂಫರಾ ರಾಜ್ಯದ ಕೌರಾ ನಮೋದಾ ಜಿಲ್ಲೆಯಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ ಎಂದು ಸಂಸ್ಥೆ ತಿಳಿಸಿದೆ.
ಈ ಸಮಯದಲ್ಲಿ ಶಾಲೆಯಲ್ಲಿ 100 ಮಕ್ಕಳು ಹಾಜರಿದ್ದರು. 17 ಮಕ್ಕಳು ಗಂಭೀರವಾಗಿ ಸುಟ್ಟು ಕರಕಲಾಗಿದ್ದಾರೆ. ಅವರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಕಿ ಅವಘಡಕ್ಕೆ ಕಾರಣವೇನೆಂದು ಅಧಿಕೃತವಾಗಿ ಬಹಿರಂಗಗೊಂಡಿಲ್ಲ. ಶಾಲೆಯೊಳಗೆ ಮರದ ರಾಶಿ ಇತ್ತು ಎಂದು ಹೇಳಲಾಗುತ್ತಿದೆ. ಯಾರೋ ಅಪರಿಚಿತ ವ್ಯಕ್ತಿ ಅದಕ್ಕೆ ಬೆಂಕಿ ಹಚ್ಚಿದ್ದಾನೆ ಎಂದು ಶಂಕಿಸಲಾಗಿದೆ.
*FIRE OUTBREAK IN ZAMFARA STATE*
The National Emergency Management Agency (NEMA) Sokoto Operations office has received report of a tragic fire incident that occurred in the Kaura-Namoda Local Government Area of Zamfara State in the early hours of Wednesday, February 5, 2025.… pic.twitter.com/MttBsK3CN9
— NEMA Nigeria (@nemanigeria) February 5, 2025