ಪಾಟ್ನಾ : ಬಿಹಾರದ ಗಯಾ ಜಿಲ್ಲೆಯಲ್ಲಿ ಒಂದು ವರ್ಷದ ಮಗುವೊಂದು ಹಾವನ್ನ ಕಚ್ಚಿ ಕೊಂದಿರುವ ವಿಚಿತ್ರ ಘಟನೆ ನಡೆದಿದೆ. ಸಾಕಷ್ಟು ಗಮನ ಸೆಳೆದಿರುವ ಈ ಘಟನೆಯು, ಮಗು ತನ್ನ ಮನೆಯ ಟೆರೇಸ್’ನಲ್ಲಿ ಆಟವಾಡುತ್ತಿದ್ದಾಗ ಸಂಭವಿಸಿದೆ. ಹಾವನ್ನ ಆಟಿಕೆ ಎಂದು ತಪ್ಪಾಗಿ ಭಾವಿಸಿದ ಮಗು ಅದನ್ನು ಎತ್ತಿಕೊಂಡು ಸರೀಸೃಪವನ್ನ ಕಚ್ಚಿದೆ, ಇದರ ಪರಿಣಾಮವಾಗಿ ಹಾವು ಸಾವನ್ನಪ್ಪಿದೆ. ನಂತ್ರ ಹಾವು ಕಂಡು ಗಾಬರಿಗೊಂಡ ಪೋಷಕರು, ಮಗುವನ್ನ ಎತ್ತಿಕೊಂಡು ವೈದ್ಯರ ಬಳಿ ಓಡಿ ಹೋಗಿದ್ದಾರೆ. ಆದ್ರೆ, ಮಗು ಸಂಪೂರ್ಣ ಆರೋಗ್ಯವಾಗಿದೆ ಎಂದು ತಿಳಿಸಿದ್ದಾರೆ. ಇದು ಕುಟುಂಬ ಮತ್ತು ವೈದ್ಯಕೀಯ ವೃತ್ತಿಪರರಿಗೆ ಆಶ್ಚರ್ಯವನ್ನುಂಟು ಮಾಡಿದೆ.
ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿದ ಮಗುವಿನ ತಾಯಿ, ಬಾಲಕನಿಗೆ ಅಪಾಯದ ಬಗ್ಗೆ ತಿಳಿದಿರಲಿಲ್ಲ ಮತ್ತು ಹಾವು ಆಟದ ವಸ್ತು ಎಂದು ನಂಬಿರಬೇಕು ಎಂದಿದ್ದಾರೆ. ಕುಟುಂಬವು ಮಗುವಿನ ಬಳಿ ಸತ್ತ ಹಾವನ್ನ ಕಂಡುಹಿಡಿದು ತಕ್ಷಣ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋದೆವು ಎಂದು ಹೇಳಿದರು.
ಆರೋಗ್ಯ ಕೇಂದ್ರದ ವೈದ್ಯಕೀಯ ಸಿಬ್ಬಂದಿ ಮಗುವನ್ನು ಪರೀಕ್ಷಿಸಿದರು ಮತ್ತು ಅವನಿಗೆ ದೈಹಿಕವಾಗಿ ಹಾನಿಯಾಗಿಲ್ಲ ಎಂದು ದೃಢಪಡಿಸಿದರು. ಹಾವು ವಿಷಕಾರಿಯಲ್ಲ ಮತ್ತು ಮಳೆಗಾಲದಲ್ಲಿ ಈ ಪ್ರದೇಶದಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ ಎಂದು ಅವರು ವಿವರಿಸಿದರು. ಮಗು ಅಪಾಯದಿಂದ ಪಾರಾಗಿದೆ ಎಂದು ತಿಳಿದ ನಂತರ ಕುಟುಂಬವು ಸಮಾಧಾನ ವ್ಯಕ್ತಪಡಿಸಿತು.
Boy from Bihar bites snake to death. Doctors declare him safe. Snake association demands justice. pic.twitter.com/6xjErC7f5H
— Dr. Ajayita (@DoctorAjayita) August 21, 2024
BIG NEWS: ಶೀಘ್ರದಲ್ಲೇ ‘ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ’ ಸ್ಥಾಪನೆ, ಆದೇಶ: ಸಿಎಂ ಸಿದ್ಧರಾಮಯ್ಯ ಘೋಷಣೆ
ಪೋಲೆಂಡ್ ಗೆ ಬಂದಿಳಿದ ಮೋದಿ: 45 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತೀಯ ಪ್ರಧಾನಿ
BIG NEWS: ‘ಸಿಎಂ ಸಿದ್ಧರಾಮಯ್ಯ’ಗೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ‘ಈ ಚಾಲೆಂಜ್’