ಬೆಂಗಳೂರು: ನಗರದಲ್ಲಿ ಕೆಪಿಎಂಇ ನಿಯಮ ಉಲ್ಲಂಘಿಸಿ ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆಯಿಂದ ಬಿಗ್ ಶಾಕ್ ನೀಡಲಾಗಿದೆ. ಸಾವಿರಾರು ರೂಪಾಯಿ ದಂಡವನ್ನು ವಿಧಿಸಿದ್ದರೇ, ಕೆಲ ಆಸ್ಪತ್ರೆಗಳ ವಿರುದ್ಧ ಎಫ್ಐಆರ್ ಕೂಡ ದಾಖಲಿಸಲಾಗಿದೆ.
ಈ ಕುರಿತಂತೆ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಾಹಿತಿ ನೀಡಿದ್ದು, ಮಾನ್ಯ ಜಿಲ್ಲಾಧಿಕಾರಿಗಳು ಬೆಂಗಳೂರು ನಗರ ಜಿಲ್ಲೆ ರವರ ಅಧ್ಯಕ್ಷತೆಯಲ್ಲಿ ದಿನಾಂಕ: 23.07.2025 ರಂದು ಪೂರ್ವಾಹ್ನ 10:30 ಗಂಟೆಗೆ ನಡೆದ ಕೆಪಿಎಂಇ ನೋಂದಣಿ ಮತ್ತು ಕುಂದು ಕೊರತೆ ಪ್ರಾಧಿಕಾರದ ಸಭೆಯಲ್ಲಿ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಕೆಪಿಎಂಇ ನಿಯಮಗಳನ್ನು ಉಲ್ಲಂಘನೆ ಮಾಡಿರುವ ಖಾಸಗಿ ವೈದ್ಯಕೀಯ ಸಂಸ್ಥೆಗಳು/ಆಸ್ಪತ್ರೆಗಳು/ಕ್ಲಿನಿಕ್‌ಗಳು/ಪುನರ್ವಸತಿ ಕೇಂದ್ರಗಳ ಒಟ್ಟು 58 ಪ್ರಕರಣಗಳನ್ನು ಮಂಡಿಸಲಾಗಿದ್ದು, ಸದರಿ ಸಂಸ್ಥೆಗಳಿಗೆ ಮಾನ್ಯ ಜಿಲ್ಲಾಧಿಕಾರಿಗಳು ಈ ಕೆಳಕಂಡಂತೆ ಕ್ರಮ ಕೈಗೊಳ್ಳಲು ಆದೇಶಿಸಿರುತ್ತಾರೆ ಎಂದು ತಿಳಿಸಿದ್ದಾರೆ.
ದಂಡ ವಿಧಿಸಿರುವಂತ ಆಸ್ಪತ್ರೆಗಳ ಪಟ್ಟಿ ಹೀಗಿದೆ..
- ಮಾರುತಿ ಕ್ಲಿನಿಕ್, ತಿಗಳರಪಾಳ್ಯ ಮೇನ್ ರೋಡ್, ಆಂಧ್ರಹಳ್ಳಿ, ಬೆಂಗಳಊರು – ರೂ.50,000
- ಶಾರದಾ ಕ್ಲಿನಿಕ್ ( ಮೌಲ್ಯ ಕ್ಲಿನಿಕ್), ತಿಗಳರ ಪಾಳ್ಯ, ಬೆಂಗಳೂರು – ರೂ.25,000
- ತ್ರಿಲೈಫ್ ಆಸ್ಪತ್ರೆ – ರೂ.50,000
- ಹುಸೈನ್ ಪಾಲಿ ಕ್ಲಿನಿಕ್ – ರೂ.50,000
- ಸುರಕ್ಷಾ ಆಸ್ಪತ್ರೆ – ರೂ.50,000
- ರೈಟ್ ಟೈಮ್ ಫೌಂಡೇಶನ್ – ರೂ.50,000
- ಸಹನ ಫೌಂಡೇಶನ್ – ರೂ.50,000
- ಶ್ರೀನಿವಾಸ ಆಸ್ಪತ್ರೆ – ರೂ.75,000
- ಸಂಜೀವಿನಿ ಹೆಲ್ತ್ ಸೆಂಟರ್ – ರೂ.50,000
- ಇನ್ಪಿನಿಟಿ ಕ್ಲಿನಿಕ್ – ರೂ.50,000
- ಬಾಲಾಜಿ ಕ್ಲಿನಿಕ್ – ರೂ.50,000
- ಗಗನ್ ಡೆಂಟಲ್ ಕೇರ್ ಕ್ಲಿನಿಕ್ – ರೂ.15,000
- ಸ್ನೇಹ ಕ್ಲಿನಿಕ್ – ರೂ.25,000
- ಫಸ್ಟ್ ಕೇರ್ ಸೂಪರ್ ಸ್ಪೆಷಾಲಿಟಿ ಹೆಲ್ತ್ ಕೇರ್ ಅಂಡ್ ಡಯಾಗ್ನೋಸಿಸ್ – ರೂ.25,000
ಪ್ರಕರಣ ಎಫ್ಐಎರ್ ದಾಖಲಿಸಲು ಸೂಚಿಸಿರುವ ಸಂಸ್ಥೆಗಳ ಪಟ್ಟಿ ಹೀಗಿದೆ
- ಸನ್ ರೈಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ
- ಸರ್ವಶಕ್ತಿ ಕನ್ಸಲ್ಟಟೇಷನ್ ಸೆಂಟರ್
- ಮಾ ಕ್ಲಿನಿಕ್
- ಶ್ರೀ ಶಕ್ತಿ ಹೆಲ್ತ್ ಕೇರ್
- ಹೆಲ್ತ್ ಲೈನ್ ಪಾಲಿ ಕ್ಲಿನಿಕ್
ಒಟ್ಟು ಮೂರು ಸಂಸ್ಥೆಗಳ ವಿರುದ್ಧದ ಪ್ರಕರಣಗಳನ್ನು ಮುಕ್ತಾಯಗೊಳಿಸಲಾಗಿದೆ. ಮುಂದಿನ ಸಭೆಯಲ್ಲಿ ಮಂಡಿಸಲು ಆದೇಶಿಸಿರುವ ಪ್ರಕರಮ, ಸಂಸ್ಥೆಗಳ ಸಂಖ್ಯೆ 9 ಆಗಿದೆ. ಸಭೆಯಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆ 27 ಎಂಬುದಾಗಿ ತಿಳಿಸಿದ್ದಾರೆ.
BREAKING: ಜು.25ರಂದು ಕರೆ ನೀಡಿರುವ ವರ್ತಕರ ಮುಷ್ಕರ ವಾಪಾಸ್ ಪಡೆದಿಲ್ಲ: ಅಧ್ಯಕ್ಷ ರವಿಶೆಟ್ಟಿ ಬೈಂದೂರು ಸ್ಪಷ್ಟನೆ
BREAKING : ಕರ್ನಾಟಕದಲ್ಲಿ ಸೆ.22 ರಿಂದ ಅ.7ರವರೆಗೆ ‘ಮರು ಜಾತಿಗಣತಿ’ ನಡೆಸಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ