ಬೆಂಗಳೂರು : ಮದ್ಯ ಪ್ರಿಯರಿಗೆ ಮತ್ತೆ ಬೆಲೆ ಏರಿಕೆಯ ಶಾಕ್ ಎದುರಾಗಿದ್ದು, ಕೆಲ ಮದ್ಯ ತಯಾರಿಕಾ ಕಂಪನಿಗಳು ಬಿಯರ್ ದರವನ್ನು ಹೆಚ್ಚಳ ಮಾಡಿವೆ.
ಬಿಯರ್ ದರವನ್ನು 10 ರಿಂದ 20 ರುಪಾಯಿ ಹೆಚ್ಚಳ ಬಿಯರ್ ದರ ಹೆಚ್ಚಳವಾದಂತಾಗಿದೆ. ಬುಲೆಟ್, ಪವರ್ ಕೂಲ್, ಲೆಜೆಂಡ್, ಆರ್.ಸಿ.ಸ್ಟ್ರಾಂಗ್, ನಾಕೌಟ್ ಮತ್ತಿತರ ಬ್ಯಾಂಡ್‌ಗಳ ಬೆಲೆಯಲ್ಲಿ ಶೇ.10 ರಿಂದ ಶೇ.15ರಷ್ಟು ಬೆಲೆ ಹೆಚ್ಚಳ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಕಚ್ಚಾ ಸಾಮಗ್ರಿಗಳ ಬೆಲೆ ಹೆಚ್ಚಳ ಹಿನ್ನೆಲೆಯಲ್ಇ ಬಿಯರ್ ದರವನ್ನು ಹೆಚ್ಚಳಮಾಡಲಾಗಿದೆ. ಕಳೆದ ಒಂದೂವರೆ ವರ್ಷದಲ್ಲಿ ಹಲವು ಬಾರಿ ದರ ಹೆಚ್ಚಳವಾಗಿದ್ದು, ಬಿಯರ್ ಬೆಲೆ ಸುಮಾರು 50 ರೂ.ಹೆಚ್ಚಳವಾದಂತಾಗಿದೆ.