ಬೆಂಗಳೂರು : ಲೋಕಸಭೆ ಚುನಾವಣೆ ಎರಡನೇ ಹಂತದ ಮತದಾನ ಮೇ. 7 ರಂದು ನಡೆಯಲಿದ್ದು, ಮತದಾನಕ್ಕೆ ಊರಿಗೆ ಹೊರಟ ಪ್ರಯಾಣಿಕರಿಗೆ ಖಾಸಗಿ ಬಸ್ ಮಾಲೀಕರು ಬಿಗ್ ಶಾಕ್ ನೀಡಿದ್ದು, ಖಾಸಗಿ ಬಸ್ ಗಳ ಟಿಕೆಟ್ ದರ ಏರಿಕೆಯಾಗಿದೆ.

2ನೇ ಹಂತದಲ್ಲಿ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಮತದಾನಕ್ಕೆ ಊರಿಗೆ ಹೊರಟವರಿಗೆ ಖಾಸಗಿ ಬಸ್ ಮಾಲೀಕರು ಬಿಗ್ ಶಾಕ್ ನೀಡಿದ್ದಾರೆ.

ಹೌದು ಮೇ.7 ರಂದು ನಡೆಯಲಿರುವ ಮತದಾನಕ್ಕೆ ಊರಿಗೆ ಹೋರಟಿರುವ ಮತದಾರ ಪ್ರಭುಗಳಿಗೆ ಇದೀಗ ಖಾಸಗಿ ಬಸ್ ಗಳ ಟಿಕೆಟ್ ದರ ಏರಿಕೆಯ ಶಾಕ್ ಎದುರಾಗಿದೆ. ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಗುಲ್ಬರ್ಗಾ, ರಾಯಚೂರು, ಬೀದರ್, ಕೊಪ್ಪಳ. ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರಕನ್ನಡ, ದಾವಣಗೆರೆ, ಶಿವಮೊಗ್ಗ ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

ಸಾಮಾನ್ಯವಾಗಿ 700- 800 ರೂ. ಇದ್ದ ಖಾಸಗಿ ಬಸ್ ಟಿಕೆಟ್ ದರ ದುಪಟ್ಟಾಗಿದೆ. ಬೆಂಗಳೂರು -ಗದಗ ಮಧ್ಯೆ ಸಾಮಾನ್ಯ ದಿನಗಳಲ್ಲಿ ಖಾಸಗಿ ಬಸ್ ಗಳು 600 ರಿಂದ 800ರೂ.ವರೆಗೂ ಟಿಕೆಟ್ ದರ ವಿಧಿಸುತ್ತವೆ. ಮೇ 6ರ ಟಿಕೆಟ್ ದರ 1250 ರೂ.ನಿಂದ 1400 ರೂ.ವರೆಗೆ ಹೆಚ್ಚಳವಾಗಿದೆ. ಬೀದರ್, ಯಾದಗಿರಿ, ಕಲಬುರಗಿ, ರಾಯಚೂರು, ವಿಜಯಪುರ, ಬೆಳಗಾವಿ ಮೊದಲಾದ ನಗರಗಳಿಗೆ 2500 ರೂ. ವರೆಗೂ ಟಿಕೆಟ್ ದರ ಏರಿಕೆಯಾಗಿದೆ ಎನ್ನಲಾಗಿದೆ.

Share.
Exit mobile version