ಬೆಂಗಳೂರು: ಖಾಲಿ ನಿವೇಶನಗಳಲ್ಲಿ ತ್ಯಾಜ್ಯ ಸಂಗ್ರಹಣೆಯಾದಲ್ಲಿ ನಿವೇಶನ ಮಾಲೀಕರಿಗೆ ನೋಟಿಸ್ ನೀಡಿ ದಂಡ ವಿಧಿಸುವಂತೆ ಪೂರ್ವ ವಲಯ ಆಯುಕ್ತರಾದ ಸ್ನೇಹಲ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪೂರ್ವ ವಲಯ ಆಯುಕ್ತರ ಕಛೇರಿಯಲ್ಲಿ ನಡೆದ ಸಾರ್ವಜನಿಕರ ಕುಂದುಕೊರತೆಯ ಅಹವಾಲಿನ ಕಾರ್ಯಕ್ರಮದಲ್ಲಿ ಇಂದು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದ ವೇಳೆ, ಸಾರ್ವಜನಿಕರೊಬ್ಬರು ಮಾತನಾಡಿ ಹೆಚ್.ಆರ್.ಬಿ.ಆರ್ ಲೇಔಟ್ ನ ಖಾಲಿ ನಿವೇಶನಗಳಲ್ಲಿ ತ್ಯಾಜ್ಯ ಹಾಗೂ ಕಟ್ಟಡ ಭಗ್ನಾವಶೇಷಗಳ ಸಂಗ್ರಹದಿಂದಾಗಿ ನೆರೆಹೊರೆಯವರಿಗೆ ತೊಂದರೆಯಾಗುತ್ತಿರುವುದರ ಕುರಿತು ಅಹವಾಲು ಸಲ್ಲಿಸಿದರು.
ಅಹವಾಲಿಗೆ ಪ್ರತಿಕ್ರಿಯಿಸಿದ ವಲಯ ಆಯುಕ್ತರು ಖಾಲಿ ನಿವೇಶನಗಳಲ್ಲಿ ತ್ಯಾಜ್ಯ ಹಾಗೂ ಕಟ್ಟಡ ಭಗ್ನಾವಶೇಷ ಸಂಗ್ರಹವಾದಲ್ಲಿ ನಾಗರಿಕರಿಗೆ ತೊಂದರೆಯಾದಂತಹ ಸಂದರ್ಭದಲ್ಲಿ ಅಂತಹ ಖಾಲಿ ನಿವೇಶನಗಳ ಮಾಲೀಕರಿಗೆ ನೋಟಿಸ್ ನೀಡಿ, ದಂಡ ವಿಧಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸ್ಮಶಾನ ಭೂಮಿಯ ದುರಸ್ತಿಗೆ ಸೂಚನೆ:
ಕೆ.ಎಸ್.ಎಫ್.ಸಿ ಲೇ ಔಟ್ ನ ಸ್ಮಶಾನ ಭೂಮಿಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಂಡು, ಸದರಿ ಸ್ಥಳದ ದುರಸ್ತಿ ಕಾರ್ಯ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಸ್ವಚ್ಛತಾ ಅಭಿಯಾನ ಕೈಗೊಳ್ಳಲು ಸೂಚನೆ:
ಹೆಚ್.ಆರ್.ಬಿ.ಆರ್ ಲೇ ಔಟ್ ನಲ್ಲಿ ಹಂಚಿಕೆಯಾಗದ ಹಾಗೂ ಹಕ್ಕುದಾರರಿಲ್ಲದ ನಿವೇಶನಗಳಲ್ಲಿ ತ್ಯಾಜ್ಯ ಸಂಗ್ರಹವಾಗಿರುವುದಲ್ಲದೇ ಸ್ಥಳದ ದುರುಪಯೋಗವಾಗುತ್ತಿದ್ದು, ಮುಂದಿನ ಶುಕ್ರವಾರದಂದು ಸ್ಥಳವನ್ನು ಸ್ವಚ್ಛಗೊಳಿಸಲು ಅಧಿಕಾರಿಗಳಿಗೆ ತಿಳಿಸಿದರು. ಸದರಿ ಸ್ಥಳವನ್ನು ಸಾರ್ವಜನಿಕರ ಉಪಯೋಗಕ್ಕಾಗಿ ಬಳಸುವಂತೆ ತಿಳಿಸಲಾಯಿತು.
ದೂರುಗಳಿಗೆ ಶೀಘ್ರ ಸ್ಪಂದನೆ:
ಸಾರ್ವಜನಿಕರ ಕುಂದುಕೊರತೆಯ ಅಹವಾಲಿನ ಕಾರ್ಯಕ್ರಮದಲ್ಲಿ ನಾಗರೀಕರಿಂದ ಬರುವ ದೂರುಗಳಿಗೆ ಶೀಘ್ರ ಸ್ಪಂದನೆಗೆ ಸೂಚನೆ ನೀಡಲಾಯಿತು. ಪೂರ್ವ ವಲಯದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ನಾಗರೀಕರು ಆಗಮಿಸಿ ವಲಯ ಆಯುಕ್ತರಿಗೆ ಧನ್ಯವಾದಗಳನ್ನು ತಿಳಿಸಿದರು.
23 ದೂರುಗಳ ಸ್ವೀಕಾರ:
ಪೂರ್ವ ವಲಯ ವ್ಯಾಪ್ತಿಯಲ್ಲಿ ಇಂದು 23 ದೂರುಗಳನ್ನು ಸ್ವೀಕರಿಸಲಾಗಿದ್ದು, ಕಾಲಮಿತಿಯೊಳಗಾಗಿ ಬಗೆಹರಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಪೂರ್ವ ವಲಯ ಆಯುಕ್ತರು ಸೂಚನೆ ನೀಡಿದರು.
ಸಾರ್ವಜನಿಕರಿಂದ ಸ್ವೀಕರಿಸಿದ ಪ್ರಮುಖ ಅಹವಾಲುಗಳು:
1. ಬಂಬೂ ಬಜಾರ್ ಸಿಟಿ ಗ್ರಂಥಾಲಯದಲ್ಲಿ ನೀರಿನ ವ್ಯವಸ್ಥೆ ಸೇರಿದಂತೆ ಇತರೆ ಸೌಲಭ್ಯಗಳನ್ನು ಒದಗಿಸುವಂತೆ ವಿನಂತಿಸಿದರು.
2. ಹೈನ್ಸ್ ರಸ್ತೆ ಶಾಖೆ ನಗರ ಕೇಂದ್ರ ಗ್ರಂಥಾಲಯದ ಕಟ್ಟಡ ಅವಶೇಷ ತೆರವಿಗೆ ಹಾಗೂ ನೀರಿನ ವ್ಯವಸ್ಥೆಗೆ ಮನವಿ ನೀಡಿದರು.
3. ಅನಧಿಕೃತ ಕಟ್ಟಡಗಳ ನಿರ್ಮಾಣದಿಂದಾಗಿ ನೆರೆಹೊರೆಯವರಿಗೆ ತೊಂದರೆಯಾಗುತ್ತಿದ್ದು ಅವುಗಳ ತೆರವಿಗೆ ಮನವಿ ಮಾಡಿದರು.
4. ಕೆ.ಎಸ್.ಎಫ್ ಸಿ ಲೇಔಟ್ ನ ಪಾಲಿಕೆಯ ಸಮುದಾಯ ಭವನವನ್ನು ಸಾರ್ವಜನಿಕ ಗ್ರಂಥಾಲಯವನ್ನಾಗಿ ಪರಿವರ್ತಿಸಲು ವಿನಂತಿಸಿದರು.
5. ವಲಯದ ಹಲವು ಪ್ರದೇಶಗಳಲ್ಲಿ ಬೀದಿ ದೀಪಗಳ ಅಳವಡಿಕೆಗೆ ಮನವಿ ನೀಡಿದರು.
6. ನಮ್ಮ ಕ್ಲಿನಿಕ್ ನ ಸೂಕ್ತ ನಿರ್ವಹಣೆಗೆ ಮನವಿ ನೀಡಲಾಯಿತು.
7. ಪಾದಾಚಾರಿಯನ್ನು ಬೀದಿಬದಿ ವ್ಯಾಪಾರಿಗಳು ಒತ್ತುವರಿ ಮಾಡಿದ್ದು ಸಂಚಾರಕ್ಕೆ ಅಡಚಣೆಯಾಗುತ್ತಿರುವುದರಿಂದ ಅಂಗಡಿಗಳ ತೆರವಿಗೆ ವಿನಂತಿಸಿದರು.
8. ಹಂಚಿಕೆಯಾಗದ ಹಾಗೂ ಹಕ್ಕುದಾರರಿಲ್ಲದ ನಿವೇಶನಗಳ ಸಮಸ್ಯೆ ಬಗೆಹರಿಸಲು ಮನವಿ.
9. ಹೈನ್ಸ್ ರಸ್ತೆಯ ಪಾದಚಾರಿ ಮಾರ್ಗ ದುರಸ್ತಿಗೆ ಮನವಿ ನೀಡಿದರು.
ಈ ವೇಳೆ ಜಂಟಿ ಆಯುಕ್ತರಾದ ಸರೋಜ, ಉಪ ಆಯುಕ್ತರಾದ ರಾಜು, ಮುಖ್ಯ ಅಭಿಯಂತರರಾದ ಸುಗುಣ, ಆರೋಗ್ಯಾಧಿಕಾರಿಯಾದ ಭಾಗ್ಯಲಕ್ಷ್ಮಿ, ಕಾರ್ಯಪಾಲಕ ಅಭಿಯತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಡಿಜಿಎಂ, ಎಜಿಎಂ, ಜಲಮಂಡಳಿ ಅಧಿಕಾರಿಗಳು ಸೇರಿದಂತೆ ಇನ್ನಿತರೆ ಸಂಬಂಧಿಸಿದ ಅಧಿಕಾರಿಗಳು ಹಾಜರಿದ್ದರು.
BREAKING: ಗ್ರೇಟರ್ ಬೆಂಗಳೂರು ಕಾಯ್ದೆ ಅಡಿ 5 ನಗರ ಪಾಲಿಕೆಗಳ ಸ್ಥಾಪನೆ: ಗೆಜೆಟ್ ಅಧಿಸೂಚನೆ ಪ್ರಕಟಿಸಿ ರಾಜ್ಯ ಸರ್ಕಾರ
‘GPay, PhonePe, Paytm’ನಲ್ಲಿ ಪಾವತಿ ವಿಫಲವಾದ್ರು ಹಣ ಕಟ್ ಆಗಿದ್ಯಾ.? ಈ ಹಂತ ಅನುಸರಿಸಿ, ಮರಳಿ ಖಾತೆ ಸೇರುತ್ತೆ