ಬೆಂಗಳೂರು: ನಕಲಿ ಸಹಿ ಮಾಡಿ ವಂಚನೆ ಮಾಡಿದಂತ ಸಾರಿಗೆ ಸಿಬ್ಬಂದಿಯನ್ನು ಅಮಾನತುಗೊಳಿಸಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆದೇಶಿಸಿದ್ದಾರೆ. ಈ ಮೂಲಕ ಇಂತಹ ವಂಚನೆ ಸಹಿಸುವುದಿಲ್ಲ ಎಂಬುದಾಗಿ ಇತರರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.
ಕೆ ಎಸ್ ಆರ್ ಟಿ ಸಿ ನಿಗಮದ ಸಿಬ್ಬಂದಿಯೊಬ್ಬರು ನಕಲಿ ಸಹಿ ಮಾಡಿ ವಂಚನೆ ಮಾಡಿರುವ ವಿಷಯವು ಸಾರಿಗೆ ಹಾಗೂ ಮುಜರಾಯಿ ಸಚಿವರ ರಾಮಲಿಂಗಾರೆಡ್ಡಿ ಅವರ ಗಮನಕ್ಕೆ ಬಂದಿತ್ತು. ಈ ಬಗ್ಗೆ ಕೂಡಲೇ ವಿಚಾರಣೆ ನಡೆಸಲು ಸೂಚಿಸಿ, ಸೂಕ್ತ ಶಿಸ್ತಿನ ಕ್ರಮ ತೆಗದುಕೊಳ್ಳಲು ನಿರ್ದೇಶಿಸಿದ್ದರು. ಅದರಂತೆ ಆರೋಪ ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಯಲ್ಲಿ ಇಂದು ಸದರಿ ಸಿಬ್ಬಂದಿಯನ್ನು ಕರ್ತವ್ಯದಿಂದ ಅಮಾನತು ಮಾಡಿ ಆದೇಶಿಸಲಾಗಿದೆ.
ರಿಚರ್ಡ್.ಜೆ . ಕಿ-ಸ-ಕಂ-ಡಾ-ಎ-ಆಪರೇಟರ್, ಲೆಕ್ಕಪತ್ರ ಇಲಾಖೆ, ಕರಾರಸಾ ನಿಗಮ, ಕೇಂದ್ರ ಕಛೇರಿ ಬೆಂಗಳೂರು ಅವರು ಸಂಸ್ಥೆಯ ಸಿಬ್ಬಂದಿಯಾದ ನಾಗರಾಜಪ್ಪ, ಸಹಾಯಕ ಕುಶಲಕರ್ಮಿ, ಶಿವಮೊಗ್ಗ ಘಟಕ ಅವರನ್ನು ಅವರ ಕೋರಿಕೆಯಂತೆ ದಾವಣಗೆರೆ ವಿಭಾಗಕ್ಕೆ ವರ್ಗಾವಣೆ ಮಾಡಿಸುವುದಾಗಿ ನಂಬಿಸಿ ಅವರಿಂದ, ವಜಾಗೊಂಡ ಚಾಲಕರಾದ ನಾಗರಾಜ ಎನ್.ಎ ಅವರನ್ನು ಪುನರ್ ನೇಮಕ ಮಾಡಿಸುವುದಾಗಿ ಮತ್ತು ಅವರ ಸ್ನೇಹಿತ ಚಂದ್ರಹಾಸ ಎಸ್ ಆಚಾರಿ, ಚಾಲಕ, ಬಿ.ಸಂ.1939 ರವರನ್ನು ಕುಂದಾಪುರ ಘಟಕದಿಂದ ಶಿವಮೊಗ್ಗ ವಿಭಾಗಕ್ಕೆ ವರ್ಗಾವಣೆ ಮಾಡಿಸುವುದಾಗಿ ನಂಬಿಸಿ, ಹಣವನ್ನು ಪಡೆದಿದ್ದರು.
ಇದಲ್ಲದೇ ಅವರುಗಳಿಗೆ ನಕಲಿ ವರ್ಗಾವಣೆ ಮತ್ತು ಪುನರ್ ನೇಮಕಾತಿ ಆದೇಶಗಳನ್ನು ತಯಾರಿಸಿ ಸೃಷ್ಟಿಸಿ, ಸದರಿ ಆದೇಶಗಳ ಮೇಲೆ ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರಾದ ಮುಖ್ಯ ಯಾಂತ್ರಿಕ ಅಭಿಯಂತರರು, ಮುಖ್ಯ ಸಂಚಾರ ವ್ಯವಸ್ಥಾಪಕರು (ಕಾ) ಮತ್ತು ನಿಕಟ ಪೂರ್ವ ವ್ಯವಸ್ಥಾಪಕ ನಿರ್ದೇಶಕ ಅವರುಗಳ ಸಹಿಗಳನ್ನು ಸ್ಕ್ಯಾನ್ ಮಾಡಿ ಅವರೇ ತಯಾರಿಸಿದ್ದ ಆದೇಶಗಳಿಗೆ ಲಗತ್ತಿಸಿ, ಪ್ರಿಂಟ್ ತೆಗೆಯುವ ಮೂಲಕ ನಕಲಿ ಆದೇಶಗಳನ್ನು ಸೃಷ್ಟಿಸಿದ್ದರು. ಜೊತೆಗೆ ಸಂಸ್ಥೆಯ ಹಿರಿಯ ಅಧಿಕಾರಿಗಳ ಸಹಿಯನ್ನು ಸ್ಕ್ಯಾನ್ ಮಾಡುವ ಮೂಲಕ ದುರುಪಯೋಗಪಡಿಸಿಕೊಂಡು ನಕಲಿ ಆದೇಶಗಳನ್ನು ಸೃಷ್ಟಿಸಿ ನಕಲಿ ವರ್ಗಾವಣೆ ಪತ್ರವನ್ನು ನೀಡಿದ್ದರು.
ಈ ಘಟನೆಯಿಂದಾಗಿ ಸಾರಿಗೆ ಸಂಸ್ಥೆಯ ಘನತೆಗೆ ಕುಂದುಂಟಾಗಿತ್ತು. ಈ ಮೂಲಕ ದುರ್ನಡತೆಯನ್ನು ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ
ತಕ್ಷಣದಿಂದ ಜಾರಿಗೆ ಬರುವಂತೆ ಇವರನ್ನು ಕರ್ತವ್ಯದಿಂದ ಅಮಾನತ್ತು ಮಾಡಿ ಆದೇಶಿಸಲಾಗಿದೆ.
BREAKING: ರೌಡಿ ಶೀಟರ್ ಬಿಕ್ಲು ಶಿವ ಹತ್ಯೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿ ರಾಜ್ಯ ಸರ್ಕಾರ ಆದೇಶ
`ಪ್ಯಾರಸಿಟಮಾಲ್’ ಬಳಸಿ ಬಟ್ಟೆಗಳ ಕಲೆಗಳನ್ನು ತೆಗೆಯಬಹುದು : ವಿಡಿಯೋ ವೈರಲ್ | WATCH VIDEO
WATCH VIDEO: ಭೀಮನ ಅಮಾವಾಸ್ಯೆಯ ಪ್ರಯುಕ್ತ ಸಿಂಗದೂರು ಚೌಡೇಶ್ವರಿ ದೇವಿಗೆ ವಿಶೇಷ ಅಲಂಕಾರ: ಹರಿದು ಬಂದ ಭಕ್ತಸಾಗರ