ಬೆಂಗಳೂರು: ದಿನೇ ದಿನೇ ಯುಪಿಐ ವಹಿವಾಟು ನಡೆಸಿದಂತ ಸಣ್ಣ ವ್ಯಾಪಾರಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆಯಿಂದ ಶಾಕ್ ನೀಡಲಾಗುತ್ತಿದೆ. ಬೆಂಗಳೂರಲ್ಲಿ ಹೂವಿನ ವ್ಯಾಪಾರಿಗೂ ತೆರಿಗೆ ಇಲಾಖೆಯಿಂದ ನೋಟಿಸ್ ನೀಡಲಾಗಿದೆ. ಬರೋಬ್ಬರಿ 52 ಲಕ್ಷ ತೆರಿಗೆ ಪಾವತಿಸುವಂತೆ ನೋಟಿಸ್ ನೀಡಲಾಗಿದೆ.
ಬೆಂಗಳೂರಿನ ಉಳ್ಳಾಲದಲ್ಲಿರೋ ಹೂವಿನ ವ್ಯಾಪಾರಿಯೊಬ್ಬರಿಗೂ ವಾಣಿಜ್ಯ ತೆರಿಗೆ ಇಲಾಖೆಯಿಂದ ತೆರಿಗೆ ಕಟ್ಟುವಂತೆ ನೋಟಿಸ್ ನೀಡಲಾಗಿದೆ. ಉಳ್ಳಾಲದಲ್ಲಿರುವಂತ ಹೂವಿನ ವ್ಯಾಪಾರಿ ಸೋಮೇಗೌಡ ಎಂಬುರಿಗೆ ವಾಣಿಜ್ಯ ತೆರಿಗೆ ಇಲಾಖೆಯಿಂದ 52 ಲಕ್ಷ ತೆರಿಗೆ ಪಾವತಿಸುವಂತೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.
ಬೆಂಗಳೂರಿನ ಉಳ್ಳಾಲದಲ್ಲಿ 10 ವರ್ಷಗಳಿಂದ ಸೋಮೇಗೌಡ ಹೂವಿನ ವ್ಯಾಪಾರ ಮಾಡುತ್ತಿದ್ದಾರೆ. ನನಗೆ ಒಂದು ತಿಂಗಳ ಹಿಂದೆ ಒಂದು ನೋಟಿಸ್ ಕೊಟ್ಟರು. 52 ಲಕ್ಷ ಎಲ್ಲಿಂದ ಹಣ ಕೊಟ್ಟೋದು ಎಂಬುದಾಗಿ ಸೋಮೇಗೌಡ ಅಲವತ್ತು ಕೊಂಡಿದ್ದಾರೆ.
ಅಂದಹಾಗೇ ಈಗಾಗಲೇ ಬೆಂಗಳೂರಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ನೋಟಿಸ್ ನಿಂದ ಬೆಚ್ಚಿ ಬಿದ್ದಿರುವಂತ ವ್ಯಾಪಾರಿಗಳು ಯುಪಿಐ ಬಳಕೆಯನ್ನು ಸ್ಥಗಿತಗೊಳಿಸಿದ್ದಾರೆ. ಚಿಲ್ಲರೆ ಅಂಗಡಿಗಳಲ್ಲಿ ಯುಪಿಐ ಬಳಕೆಯಿಲ್ಲ. ಕ್ಯಾಶ್ ಓನ್ಲಿ, ದಯವಿಟ್ಟು ದುಡ್ಡು ಕೊಟ್ಟು ಸಹಕರಿಸಿ ಎಂಬುದಾಗಿ ಎಂಬುದಾಗಿ ಬೋರ್ಡ್ ಹಾಕಿರುವುದು ಕಂಡು ಬಂದಿದೆ.
CRIME: 30 ಲಕ್ಷ ರೂ.ಗಾಗಿ ಬ್ಲ್ಯಾಕ್ ಮೇಲ್ ಮಾಡಿದ ಗೆಳತಿಯ ತಂದೆ: ಬಿಟೆಕ್ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು